ಬೆಂಗಳೂರು:- ಬೆಂಗಳೂರಿನ ಕೆಂಗೇರಿಯಲ್ಲಿ ಅಣ್ಣ-ತಂಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ DCM ಡಿಕೆ ಶಿವಕುಮಾರ್ ರಿಂದ ಪರಿಹಾರ ಘೋಷಣೆ ಮಾಡಲಾಗಿದೆ.
ಈ ಸಂಬಂಧ ಮಾತನಾಡಿದ ಅವರು,ಮಕ್ಕಳು ಇಬ್ಬರು ಸಣ್ಣವರು ಹಾಗಾಗಿ ಬಿಬಿಎಂಪಿಯಿಂದ ಇಬ್ಬರು ಮಕ್ಕಳಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಪರಿಹಾರ ನೀಡುವ ಸಂಬಂಧ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಜತೆ ಮಾತಾಡಿದ್ದೇನೆ. ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಕೆಂಗೇರಿ ಸೇರುತ್ತದೆ ಎಂದಿದ್ದಾರೆ.
ನಾಗಮ್ಮ ಪುತ್ರಿ ಮಹಾಲಕ್ಷ್ಮೀ, ಪುತ್ರ ಜಾನ್ ಸೀನ ಮೃತಪಟ್ಟಿದ್ದರು. ನಿನ್ನೆ ಬೆಳಗ್ಗೆ ಆಕಸ್ಮಿಕವಾಗಿ ಕೆಂಗೇರಿ ಕೆರೆಗೆ ಬಿದ್ದಿದ್ದ ತಂಗಿ ಮಹಾಲಕ್ಷ್ಮೀ ರಕ್ಷಣೆಗಾಗಿ ಕೆರೆಗೆ ಇಳಿದಿದ್ದ ಅಣ್ಣ ಜಾನ್ ಸೀನ ಕೂಡ ಮೃತಪಟ್ಟಿದ್ದ. ನಿನ್ನೆ ಅಣ್ಣ ತಂಗಿಯ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಮೃತ ಮಕ್ಕಳ ತಾಯಿ ನಾಗಮ್ಮಗೆ ಪರಿಹಾರ ಘೋಷಿಸಲಾಗಿದೆ.
ಮೃತ ಇಬ್ಬರು ಮಕ್ಕಳು ಮತ್ತು ತಾಯಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹರ್ಷ ಲೇಔಟ್ನಲ್ಲಿ ವಾಸವಾಗಿದ್ದರು, ಕನಿಷ್ಠ ಸೌಜನಕ್ಕಾದರೂ ಶಾಸಕ ಎಸ್ ಟಿ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಇಬ್ಬರು ಮಕ್ಕಳ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದೆ ಪಾಪ ಆ ತಾಯಿ ನಾಗಮ್ಮ ಗೋಳಾಡಿದ್ದಾರೆ.
ಮೃತರಾದ ಜಾನ್ ಸೀನಾ ಮತ್ತು ಮಹಾಲಕ್ಷ್ಮೀ ಮೃತದೇಹವನ್ನ ಮೈಸೂರು ರೋಡ್ನಲ್ಲಿರುವ ರಾಜರಾಜೇಶ್ವರೀ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ನಂತರ ಕೆಂಗೇರಿ ಉಪನಗರದ ಬಿಬಿಎಂಪಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.