ವಿಜಯಪುರ: ರೇಲ್ವೇ ಬ್ರಿಡ್ಜ್ ಬಳಿ ಹಾಕಲಾಗಿದ್ದ ಹೈಟ್ ರಿಸ್ಟ್ರಿಕ್ಟರ್ ತುಂಡಾಗಿ ಬಿದ್ದು ವಾಹನ ಸವಾರರಿಗೆ ತೊಂದರೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮ ಬಳಿಯ ರೇಲ್ವೇ ಸೇತುವೆ ಬಳಿ ನಡೆದಿದೆ. ರೇಲ್ವೇ ಸೇತುವೆಗೆ ಎತ್ತರ ವಾಹನಗಳು ತಾಗಬಾರದೆಂದು ಹೈಟ್ ರಿಸ್ಟ್ರಿಕ್ಟರ್ ಅಳವಡಿಸಲಾಗಿತ್ತು.
ರಾತ್ರಿ ಕಬ್ಬು ಸಾಗಾಟ ಮಾಡುವ ವಾಹನಕ್ಕೆ ತಾಗಿ ಹೈಟ್ ರಿಸ್ಟ್ರಿಕ್ಟರ್ ಮುರಿದು ಬಿದ್ದಿದೆ. ಹೈಟ್ ರಿಸ್ಟ್ರಿಕ್ಟರ್ ಬಿದ್ದಿರೋ ಕಾರಣದಿಂದ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ರಸ್ತೆ ಪಕ್ಕದ ಜಾಗದಲ್ಲಿ ವಾಹನ ಸವಾರರು ಹಾಯ್ದು ಹೋಗುತ್ತಿದ್ದಾರೆ. ಬಳಿಕ ತುಂಡಾಗಿ ಬಿದ್ದ ಹೈಟ್ ರಿಸ್ಟ್ರಿಕ್ಟರ್ ಅನ್ನು ರೇಲ್ವೇ ಆಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವು ಮಾಡಿ ವಾಹನ ಸಂಚಾರ ಸುಗಮ ಮಾಡಿ ಕೊಟ್ಟರು.