ಬೆಂಗಳೂರು:– ಜೂನ್ 8 ಕ್ಕೆ ಪಟ್ಟಣಗೆರೆ ಶೆಡ್ನಲ್ಲಿ ರಕ್ಕಸ ಡಿ ಗ್ಯಾಂಗ್ ನ ಅಟ್ಟಹಾಸದ ಕ್ರೂರತೆ ಎಲ್ಲೆ ಮೀರಿತ್ತು. ರೇಣುಕಾಸ್ವಾಮಿಯ ಚೀರಾಟ,ನರಳಾಟದ ಆಕ್ರಂದನ ಮುಗಿಲು ಮುಟ್ಟಿತ್ತು. ಅಂದು ರೇಣುಕಾಸ್ವಾಮಿ ಮೇಲೆ ನೆಡೆಸಿದ ಭೀಕರ ಹಲ್ಲೆಗೆ ಮತ್ತೆರಡು ಫೋಟೋಗಳು ಸಾಕ್ಷಿಯಾಗಿದೆ. ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರೋ ಫೋಟೋಗಳನ್ನು ಕಂಡ ಪೋಷಕರಿಗೆ ಮೂರ್ಚೆ ಹೋದಂತಾಗಿದೆ. ಹಲ್ಲೆಯ ವೈರಲ್ ಫೋಟೋಗಳ ಡಿಟೇಲ್ಸ್ ತೋರಿಸ್ತೀವಿ ನೋಡಿ..
ಕೈಮುಗಿದು ಪರಿಪರಿಯಾಗಿ ಬೇಡಿಕೊಂಡ್ರೂ ಬಿಡ್ಲಿಲ್ಲ ರಕ್ಕಸ ಪಡೆ.!
ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ ಲಾಠಿ,ರಿಪೀಸ್ ಗಳು.!
ಸವಕಲು ದೇಹಿ ರೇಣುಕಾಸ್ವಾಮಿ ಮೇಲೆ ಮುಗಿಬಿದ್ದು ದರ್ಶನ್ ಗ್ಯಾಂಗ್ ನಡೆಸಿದ ಕ್ರೌರ್ಯ ಅಂತಿಂತದ್ದಲ್ಲ..ಮೈಯೆಲ್ಲ ಸುಟ್ಟರು,ರಾಡ್ ನಿಂದ ಹೊಡೆದ್ರು ಶೆಡ್ ನೊಳಗೆ ಅಟ್ಟಾಡಿಸಿದ್ರು, ನೆಲಕ್ಕೆ ಬಡಿದ್ರು, ಕೈ ಕೈ ಮುಗಿದು ಬೇಡಿದರೂ ಕರಗಲಿಲ್ಲ ದರ್ಶನ್ ಮನಸ್ಸು. ಗೋಡೆಗೆಸೆದು ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೊಂದ ಡಿ ಗ್ಯಾಂಗ್ ಕ್ರೌರ್ಯಕ್ಕೆ ಸಾಕ್ಷಿ ಹೇಳುತ್ತಿವೆ ಈ ಈ ಫೋಟೋಗಳು.ರೇಣುಕಾಸ್ವಾಮಿ ಮೇಲೆ ಎರಗಿದ್ದ ಸೈಕೋ ರಕ್ಷಸರು ನನ್ನ ಬಿಟ್ ಬಿಡಿ ಎಂದು ಪರಿಪರಿಯಾಗಿ ಬೇಡಿದ್ರೂ ಬಿಡಲಿಲ್ಲ..ಕಿರುಚಾಡಿದ್ರೂ ಬಿಡದ ಹೊಡೆದ ಕಿರಾತಕರ ಕ್ರೂರತೆಯನ್ನು ಒಂದೊಂದು ಫೋಟೋಗಳೂ ಹೇಳುತ್ತಿವೆ. ಪಟ್ಟಣಗೆರೆ ಶೆಡ್ ನಲ್ಲಿ ಕಣ್ಣೀರಿಡ್ತಾ ಬೇಡಿಕೊಳ್ತಿರುವ ರೇಣುಕಾಸ್ವಾಮಿ ಪ್ರಕರಣದ ಭೀಕರತೆ ಬಿಚ್ಚಿಟ್ಟಿವೆ. ಹಲ್ಲೆ ಮಾಡಿದ ನಂತರ ಪವನ್ ಫೋಟೋಗಳನ್ನು ತೆಗೆದಿದ್ದ ನಂತರ ಸ್ಟೋನಿಬ್ರೋಕ್ ಹೋಟೆಲ್ ಗೆ ಬಂದು ದರ್ಶನ್ಗೆ ಫೋಟೋಗಳನ್ನು ತೊರಿಸಿ ರೇಣುಕಾಸ್ವಾಮಿಯನ್ನಯ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾನೆ . ಆನಂತರ ಶೆಡ್ ಗೆ ಹೋಗಿದ್ದ ದರ್ಶನ್ ಸ್ವಾಮಿ ಮೇಲೆ ಮನಸೋಯಿಚ್ಚೆ ಹಲ್ಲೆ ಮಾಡಿದ್ದಾನೆ. ರೇಣುಕಾಸ್ವಾಮಿ ಕೊಲೆಯಾಗುತ್ತಿದ್ದಂತೆ ಇನ್ನೆಲ್ಲಿ ತಗಲಾಕಿಕೊಳ್ತೇವೋ ಎಂದು ಪವನ್ ತನ್ನ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದ.. ಆದರೆ ಪೊಲೀಸರು ಬಿಡಬೇಕಲ್ಲ ಡಿಲೀಟ್ ಮಾಡಿದ್ದ ಫೋಟೋಗಳನ್ನ FSL ಟೀಂ ರಿಟ್ರೀವ್ ಮಾಡಿದ್ದಾರೆ.ಹಲ್ಲೆಗೊಳಗಾಗಿ ಅರೆಜೀವ ಸ್ಥಿತಿಯಲ್ಲಿ ಬಿದ್ದಿರುವ ಹಾಗು ಶೆಡ್ ನಲ್ಲಿ ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋಗಳು ಈಗ ವೈರಲ್ ಆಗಿವೆ.
ಸೆ.14 ಹಾಗೂ 15 ರಂದು ಗಗನಚುಕ್ಕಿ ಜಲಪಾತೋತ್ಸವ: ಪಿ.ಎಂ. ನರೇಂದ್ರಸ್ವಾಮಿ!
ರೇಣುಕಾಸ್ವಾಮಿ ಕೊಲೆಗೆ ಬಳಸಿದ್ದ ಮೆಗ್ಗಾರ್, ಲಾಠಿ, ಮರದ ಕೊಂಬೆ ಫೋಟೋಗಳು ವೈರಲ್ ಆಗಿವೆ..ರೇಣುಕಾಸ್ವಾಮಿಯನ್ನು ಹಗ್ಗದಿಂದ ಕಟ್ಟಿಹಾಕಿ ಚಿತ್ರಹಿಂಸೆ ನೀಡಿ ಕೋಲಿನಿಂದ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ..ಇನ್ನು ಕೊಲೆಗೂ ಮೊದಲು ಹಾಗು ಕೊಲೆಯ ನಂತರ ಪಟ್ಟಣಗೆರೆ ಶೆಡ್ ಹಾಗು ದರ್ಶನ್ ಮನೆಯ ಸಿಸಿಟಿವಿ ವಿಡಿಯೋ ಡಿಲೀಟ್ ಮಾಡಲಾಗಿತ್ತು. ಇದೀಗ ಸಿಸಿಟಿವಿ ಡಿವಿಆರ್ ರಿಟ್ರೀವ್ ಆಗಿರೋದ್ರಿಂದ ಕೊಲೆ ನಂತರ ದರ್ಶನ್ ಮನೆಗೆ ಬಂದಿದ್ದ ಆರೋಪಿಗಳು ಚರ್ಚೆ ಪೂಟೇಜ್ ಸಿಕ್ಕಿದೆ. ದರ್ಶನ್ ಮನೆಗೆ ಹೋಗಲು ಬಳಸಿದ ಕಾರು ಸ್ಕಾರ್ಪಿಯೋ ಕಾರಿನಲ್ಲಿ ಶೆಡ್ ನಿಂದ ಮನೆಗೆ ಹೋಗಿರೋದು ಪಟ್ಟಣಗೆರೆ ಶೆಡ್ ನಲ್ಲಿ ನಡೆದಿದ್ದ ರಕ್ಕಸರ ಅಟ್ಟಹಾಸ ಎಲ್ಲವೂ ರಿಟ್ರೀವ್ ಆಗಿ ಚಾರ್ಜ್ ಶೀಟ್ ನಲ್ಲಿ ನಮೂದಿಸಲಾಗಿದೆಯಂತೆ… ..!
ಇನ್ನು ಮೈಸೂರಿನಲ್ಲಿ ದರ್ಶನ್ ಅರೆಸ್ಟ್ ಆಗುತತಿದ್ದಂತೆ ನನಗೇನೂ ಗೊತ್ತಿಲ್ಲ ಎಲ್ಲಾ ನಮ್ಮ ಹುಡುಗರೇ ಮಾಡಿರೋದು ಅಂತ ಕರಿಯ ಡೌವ್ ಮಾಡಿದ್ದ. ದ್ರೆ ವಿಚಾರಣೆಯಲ್ಲಿ ಪ್ರತಿಯೊಬ್ಬ ರೋಪಿಯೋ ದರ್ಶನ್ ನತ್ತನೇ ಬೊಟ್ಟು ಮಾಡಿದ್ದಾರಂತೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಸೂತ್ರದಾರಿಯೇ ದರ್ಶನ್ ಕಿಡ್ನ್ಯಾಪ್ ನಿಂದ ಹಿಡಿದು ಹಲ್ಲೆ, ಕೊಲೆ, ಸಾಕ್ಷಿನಾಶ, ಹೆಣ ಸಾಗಾಟ ಪಿತೂರಿ ಎಲ್ಲದರಲ್ಲೂ ದರ್ಶನ್ ಪ್ರಮುಖ ಪಾತ್ರವಹಿಸಿದ್ದ ಎಂದು ಎಲ್ಲಾ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್ ವಿರುದ್ಧ ಗಂಭೀರವಾದ ಆರೋಪಗಳು ಮಾಡಿದ್ದು ಈ ಬಗ್ಗೆ ಪೂರಕ ದಾಖಲೆಗಳ ಕಲೆ ಹಾಕಿರೋ ತನಿಖಾ ತಂಡ ಬಾಕಿ ಉಳಿದಿರೋ ಸಿಎಫ್ಎಸ್ಎಲ್ ವರದಿಯನ್ನು ಬೇಗ ನೀಡುವಂತೆ ಮನವಿ ಮಾಡಿದ್ದಾರೆ. ಪವಿತ್ರಗೌಡ ವಿರುದ್ಧವೂ ಕೇವಲ ಎರಡು ಆರೋಪಗಳ ಮೇಲೆ ಚಾರ್ಜ್ ಶೀಟ್ ಹಾಕಿದ್ದು ಕಿಡ್ನ್ಯಾಪ್ ಹಾಗೂ ಕೊಲೆಗೆ ಪ್ರಚೋದನೆ ಆರೋಪದ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆಯಂತೆ..
ಆರ್ ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ಇದು ನಟ ದರ್ಶನ್ ನೆಚ್ಚಿನ ರೆಸ್ಟೋರೆಂಟ್, ದಾಸನಿಗಾಗಿಯೇ ಹೇಳಿ ಮಾಡಿಸದ್ದ ಪಬ್ . ಅದೆಷ್ಟು ಸಾರಿ ಸ್ನೇಹಿತರ ಜೊತೆ ಬಂದು ಇಲ್ಲಿ ಪಾರ್ಟಿ ಮಾಡಿದ್ದಾರೋ ಲೆಕ್ಕವೇ ಯಿಲ್ಲ. ಆದರೆ ಈ ಬಾರಿ ಹೀಗೆ ಪೋಲಿಸರ ಸಮ್ಮುಖದಲ್ಲಿ ಕೂತಿರೋದು ಇದೆ ಫಸ್ಟ್..! ಯೆಸ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹತ್ಯೆಗೂ ಇದೆ ಪಬ್ ನಲ್ಲಿ ನಟ ಚಿಕ್ಕಣ್ಣ, ಯಶಸ್ ಸೂರ್ಯ, ವಿನಯ್, ಪ್ರದ್ಯೂಶ್ ಒಟ್ಟಿಗೆ ಪಾರ್ಟಿ ಮಾಡಿದ್ರು. ಹಾಗಾಗಿ ಹತ್ತೆಯ ನಂತರ ಆರೋಪಿಗಳನ್ನ ಅರೆಸ್ಟ್ ಮಾಡಿದ ಪೋಲಿಸರು ಸ್ಪಾಟ್ ಮಹಜರು ಮಾಡಿದ್ರು.ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿರುವ ತನಿಖಾ ತಂಡ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ..ಹತ್ಯೆಗು ಮುನ್ನ ಯಾವ ಯಾವ ಚೇರ್ ನಲ್ಲಿ ಕೂತು ಪಾರ್ಟಿ ಮಾಡಿದ್ರೋ ಅದೇ ರೀತಿಯಲ್ಲಿ ಸೀನ್ ರೀ ಕ್ರಿಯೆಟ್ ಮಾಡಿ ಸ್ಪಾಟ್ ಮಹಜರು ಮಾಡಿದ್ದಾರೆ. ಬಲಭಾಗದಲ್ಲಿ ವಿನಯ್ ,ಪ್ರದ್ಯೂಶ್, ದರ್ಶನ್ ಚಿಕ್ಕಣ್ಣ ಕೂತಿದ್ರೆ ಪವನ್ ನಿಂತುಕೊಂಡಿದ್ದಾನೆ.ಎಡಗಡೆ ಮೊದಲ ಚೇರ್ ನಲ್ಲಿ ದರ್ಶನ್ ಮ್ಯಾನೇಜರ್ ನಾಗರಾಜ್ ಕೂತಿದ್ದಾರೆ .ಇದರ ಪಿನ್ ಪಿನ್ ಟು ಮಾಹಿತಿ ಕಲೆ ಹಾಕಿ ಆರೋಪಿ ಗಳ ಹೇಳಿಕೆಗಳನ್ನ ದಾಖಲೆಗಳ ರೂಪದಲ್ಲಿ ನಮೂದಿಸಲಾಗಿದೆ. ಸ್ಟೋನಿ ಬ್ರೂಕ್ ಸೇರಿದಂತೆ ಪಟ್ಟಣಗೆರೆ ಶೆಡ್, …