ಬಿಗ್ ಬಾಸ್ ಸೀಸನ್ 8 ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಕನ್ನಡದ ರ್ಯಾಪರ್ ಬ್ರೋ ಗೌಡ ಆಲಿಯಾಸ್ ಶಮಂತ್ ಗೌಡ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಧಾರವಾಹಿ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿರುವ ಶಮಂತ್ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ತಾನು ಮದುವೆಯಾಗುತ್ತಿರುವ ಸುದ್ದಿಯನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ಫೆಬ್ರುವರಿ 14 ರ ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ.
ಶಮಂತ್ ಮೇಘನಾ ಎಂಬುವವರ ಜೊತೆ ಹಸೆಮಣೆ ಏರುತ್ತಿದ್ದಾರೆ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ , ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಮದುವೆ ಎಲ್ಲಿ, ಯಾವಾಗ ಅನ್ನೋ ಮಾಹಿತಿಯನ್ನು ಶಮಂತ್ ಇನ್ನೂ ತಿಳಿಸಿಲ್ಲ.