ರೀಲ್ಸ್ ಮೂಲಕ ಖ್ಯಾತಿ ಘಳಿಸಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗು ಸದ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಬ್ಯುಸಿಯಾಗಿರುಗ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಮೇಘನಾ ಎಂಬಾಕೆಯನ್ನು ಶಂಮತ್ ಗೌಡ ಮದುವೆಯಾಗುತ್ತಿದ್ದು ಇತ್ತೀಚೆಗೆ ಸಿಂಪಲ್ ಅಗಿ ಉಂಗುರು ಬದಲಾಯಿಸಿಕೊಂಡಿದ್ದಾರೆ.
ಶಮಂತ್ ಹಾಗೂ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಇವರಿಬ್ಬರೂ ಜೊತೆಯಾಗಿ ರೀಲ್ಸ್ ಕೂಡಾ ಮಾಡುವ ಮೂಲಕ ಗಮನ ಸೆಳೆದಿದ್ದರು. ಪ್ರೇಮಿಗಳ ದಿನದಂದು ಇವರಿಬ್ಬರು ಪ್ರೀತಿಗೆ ಸಂಬಂಧಿಸಿದ ಸ್ಪೆಷಲ್ ವಿಡಿಯೋ ಒಂನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ಶಮಂತ್ ಗೌಡ ಪ್ರೀತಿಸಿದ ಹುಡುಗಿಯ ಜೊತೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಶಮಂತ್ ತನ್ನ ಗೆಳತಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಶಮಂತ್ ಗೌಡ ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಹೊಸ ಕನ್ನಡ ಸಿನಿಮಾವೊಂದರಲ್ಲಿ ತಾನು ಹೀರೋ ಆಗಿ ನಟಿಸುತ್ತಿರುವುದರ ಬಗ್ಗೆ ಶಮಂತ್ ಅಪ್ಡೇಟ್ ಕೊಟ್ಟಿದ್ದಾರೆ. ಶಮಂತ್ ಅಭಿನಯಿಸುತ್ತಿರುವ ಈ ಸಿನಿಮಾವನ್ನು ‘ರಾಘು, ‘ಶೆಫ್ ಚಿದಂಬರ’ ಚಿತ್ರಗಳ ನಿರ್ದೇಶಕ ಎಂ ಆನಂದ್ ರಾಜ್ ಡೈರೆಕ್ಟ್ ಮಾಡುತ್ತಿದ್ದಾರೆ.