ಬೆಂಗಳೂರು: ಜನರನ್ನು ಕಾಯಬೇಕಾದ ಕೆಲ ಪೊಲೀಸರು ಮಾಡುವ ಭ್ರಷ್ಟಾಚಾರದ ಕಳಂಕ ಇಂದು ಇಡೀ ಇಲಾಖೆಯನ್ನು ತಲೆತಗ್ಗಿಸುವಂತಿವೆ. ಅದರಲ್ಲೂ ಪೊಲೀಸ್ ಅಂದ್ರೆ ಲಂಚ, ಲಂಚ ಅಂದ್ರೆ ಪೊಲೀಸ್ ಅಂತಾರೆ ನೊಂದಿರುವ ಜನರು. ಈಗ ಸೋಶಿಯಲ್ ಮೀಡಿಯಾ ಬಂದಾಗಿನಿಂದಂತೂ ಹಲವು ಪೊಲೀಸರ ಮುಖವಾಡ ಕಳಚಿ ಬೀಳುತ್ತಿದೆ.
ಇನ್ನು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಸಂಚಾರ ಪೊಲೀಸರು ಫೋನ್ಪೇ ಮತ್ತು ಗೂಗಲ್ಪೇ ಮೂಲಕ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಒಬ್ಬ ವಾಹನ ಸವಾರ, ಟ್ರಾಫಿಕ್ ನಿಯಮ ಉಲ್ಲಂಘನೆಗೆ 500 ರೂಪಾಯಿಗಳನ್ನು ಫೋನ್ಪೇ ಮೂಲಕ ಪೊಲೀಸರಿಗೆ ಪಾವತಿಸಲಾಗಿದೆ ಎಂದು ದೂರಿದ್ದು, ಎಸಿಪಿಗೆ ಮೇಲ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಎಸಿಪಿ ತನಿಖೆಗೆ ಆದೇಶಿಸಿದ್ದಾರೆ.
Maha Shivratri 2025: ಮಹಾಶಿವರಾತ್ರಿ ಹಬ್ಬದ ಪೂಜಾ ಮುಹೂರ್ತ, ಇತಿಹಾಸ ಮತ್ತು ಮಹತ್ವ ತಿಳಿಯಿರಿ!
ವೈಟ್ಫೀಲ್ಡ್ ಸಂಚಾರ ಪೊಲೀಸರ ಲಂಚಾವಾತರದ ಬಗ್ಗೆ ವಾಹನ ಸವಾರ ರಾಚಮಲ್ಲ ಎಸಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಕಾನ್ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಚಮಲ್ಲ ದೂರಿನಲ್ಲಿ ಆಗ್ರಹಿಸಿದ್ದಾರೆ. ಇ ಮೇಲ್ ಮೂಲಕ ಎಸಿಪಿ ರಮೇಶ್ ದೂರು ಸ್ವೀಕಾರ ಮಾಡಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಸಂಚಾರಿ ಠಾಣೆ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿದ್ದಾರೆ.