ಬೆಂಗಳೂರು: ಫೋನ್ ಪೇ ಮೂಲಕ ಲಂಚ ಪಡೆದ ಲೇಡಿ ಇನ್ಸಪೆಕ್ಟರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಜರುಗಿದೆ. ಡಿಸಿಆರ್ ಬಿ ಪೊಲೀಸ್ ಇನ್ಸ್ಪೆಕ್ಟರ್ ಗೀತಾ ಲೋಕಾಬಲೆಗೆ ಬಿದ್ದ ಅಧಿಕಾರಿ. ಸ್ಲಂ ಬೋರ್ಡ್ ನಲ್ಲಿ ಮನೆ ಪಡೆಯಲು ಜಾತಿ ಪ್ರಮಾಣಪತ್ರ ಪಡೆಯೋಕೆ ಲೋಕೇಶ್ ಎಂಬ ವ್ಯಕ್ತಿ ಅರ್ಜಿ ಹಾಕಿದ್ದ.
ಈ ವೇಳೆ ದಾಖಲೆ ನೀಡಲು ವ್ಯಕ್ತಿಯಿಂದ 25 ಸಾವಿರ ಲಂಚಕ್ಕೆ ಗೀತಾ ಬೇಡಿಕೆ ಇಟ್ಟಿದ್ದರು. ಈ ವೇಳೆ ಮುಂಗಡವಾಗಿ ಹತ್ತು ಸಾವಿರ ಫೋನ್ ಪೇ ಮಾಡಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ: ದೊಡ್ಡ ಅಪಾಯ ಕಾದಿದೆ ಎಂದ ಕೇಂದ್ರ ಸರ್ಕಾರ
ಕೊಳೆಗೇರಿ ನಿಗಮದ ವತಿಯಿಂದ ಮನೆ ಪಡೆಯಲು ಲೊಕೇಶ್ ಅರ್ಜಿ ಸಲ್ಲಿಸಿದ್ದರು. ನಕಲಿ ಜಾತಿಪ್ರಮಾಣ ಪತ್ರ ಸಲ್ಲಿಸಿ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿ ಲೊಕೇಶ್ ವಿರುದ್ದ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಡಿಸಿಆರ್ಇ ಇಲಾಖೆಗೆ ದೂರು ನೀಡಿದ್ದರು.
ನೈಜತೆ ಪರಿಶೀಲಿಸಿ ತನಿಖೆ ಕೈಗೊಂಡ ಇನ್ಸ್ಪೆೆಕ್ಟರ್ ಗೀತಾ, ಅರ್ಜಿಯನ್ನು ವಿಲೇವಾರಿ ಮಾಡಲು ದೂರುದಾರರಿಗೆ 25 ಸಾವಿರ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೊಕೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಇದರಂತೆ ಅಧಿಕಾರಿಗಳು ಸಂಜೆ ಕಾರ್ಯಾಚರಣೆ ಕೈಗೊಂಡಿದ್ದು, ದೂರುದಾರನಿಂದ ಫೋನ್ ಪೇ ಮೂಲಕ 10 ಸಾವಿರ ರೂಪಾಯಿ ಪಡೆಯುವಾಗ ಇನ್ಸ್ಪೆೆಕ್ಟರ್ ಸಿಕ್ಕಿಬಿದ್ದಿದ್ಧಾರೆ. ಲಂಚ ಸ್ವೀಕರಿಸಲು ಮಧ್ಯವರ್ತಿಯಾಗಿದ್ದ ರಿಚರ್ಡ್ ಎಂಬವನನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.