ಕೋಲಾರ:- ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ. ಇಸಿ ಹಾಗು ಇತರೆ ದಾಖಲೆ ಪಡೆಯಲು ನೇರವಾಗಿ ಸಿಬ್ಬಂದಿಗಳು ಹಣ ಪಡೆದುಕೊಂಡಿದ್ದಾರೆ.
ಎಲ್ಲರ ಬಾಯಲ್ಲೂ ನೀರೂರಿಸುವ ಉತ್ತರ ಕರ್ನಾಟಕದ ಸ್ಪೆಶಲ್ ಮಿರ್ಚಿ..!
ಸಿಬ್ಬಂದಿ ಹಣ ಪಡೆಯುವಾಗ ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕರು ವೈರಲ್ ಮಾಡಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೆ ಸಿಬ್ಬಂದಿಯ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ಸಾರ್ವಜನಿಕರು ನೋಂದಣಿ ಹಾಗು ಇತರೆ ಕೆಲಸಗಳಿಗೆ ಕಾಯ್ತಿರುವ ವೇಳೆಯೇ ಹುಟ್ಟು ಹಬ್ಬ ಆಚರಿಸಿ ಸಮಯ ವ್ಯರ್ಥ ಮಾಡಿದ್ದಾರೆ.
ಉಪನೋಂದಣಾಧಿಕಾರಿ ಪ್ರಸಾದ್ ಸಮ್ಮುಖದಲ್ಲಿ ನಡೆದ ಸಿಬ್ಬಂದಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡದಂತೆ ನಿರ್ಬಂದ ಇದ್ದರು ಅಧಿಕಾರಿಗಳ ಬೇಜವಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.