ಬೆಂಗಳೂರು:- ಯಾರಾದ್ರೂ ನಿಮಗೆ ಶ್ಯೂರಿಟಿ ಇಲ್ದೆ ಸಾಲ ಕೊಡ್ತೀನಿ ಅಂದ್ರೆ, ನಂಬೇಡಿ ಮರ್ರೆ. ನಿಮಗೆ ಮೋಸ ಮಾಡಿ ಎಸ್ಕೇಪ್ ಆಗಬಹುದು. ಹೆಚ್ಚು ಜಾಣರು, ವಿದ್ಯಾವಂತರೇ ತುಂಬಿರೋ ಸಿಲಿಕಾನ್ ಸಿಟಿಯಲ್ಲಿ ಈ ರೀತಿ ಮೋಸದ ಜಾಲ ಕಂಡು ಬಂದಿದೆ. ಏನಿದು ಸ್ಟೋರಿ ಅಂತೀರಾ!? ಈ ಸುದ್ದಿ ಕಂಪ್ಲೀಟಾಗಿ ಓದಿ.
ದೇವೇಗೌಡರು ಸುಳ್ಳು ಹೇಳ್ತಿದ್ದಾರೆ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಮೊಯ್ಲಿ: ಜಮೀರ್!
ಎಸ್, ಶ್ಯೂರಿಟಿ ಇಲ್ಲದೆ ಸಾಲ ಕೊಡುತ್ತೇವೆ ಎಂಬ ಮಾತನ್ನು ನಂಬಿ 2 ಸಾವಿರ ಮಂದಿ ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆನಂದ್, ರೇಷ್ಮಾ, ಅಂಜುಂ, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ. ಸಾಲ ಕೊಡಿಸುವುದಾಗಿ ಹೇಳಿ 2ಸಾವಿರಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೈಗ್ರೌಂಡ್ಸ್ ಪೊಲೀಸರು ರೇಷ್ಮಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಕಾರ ಕೋ-ಆಪರೇಟಿವ್ ಸೊಸೈಟಿ ಲೋನ್ ಹೆಸರಲ್ಲಿ ವಂಚನೆ ಮಾಡಿದ್ದಾರೆ. 1 ಲಕ್ಷದಿಂದ 25ಲಕ್ಷದವರೆಗೂ ಸಾಲ ಕೊಡುವುದಾಗಿ ಹೇಳಿಕೆ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಸಾರ್ವಜನಿಕರಿಗೆ ಲೋನ್ ಕೊಡಿಸಲಿಕ್ಕೆ ಪ್ರೊಸೆಸಿಂಗ್ ಫೀಜ್ ಹಾಗೂ ಅಕೌಂಟ್ ಓಪನಿಂಗ್ ಫೀಜ್ ಹೆಸರಲ್ಲಿ ಸಾವಿರಾರು ರೂ. ಪಡೆದಿದ್ದಾರೆ ಎನ್ನುವ ಆರೋಪವಿದೆ. 15 ದಿನಗಳೊಳಗಾಗಿ ಸಾಲ ಕೊಡುತ್ತೇವೆ ಎಂದು ಹೇಳಿದ್ದರು, ಸಾಲಕ್ಕಾಗಿ ಮನವಿ ಮಾಡಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಅನ್ನೇ ಲೋನ್ ಅಕೌಂಟ್ ನಂಬರ್ ಎಂದು ಆರೋಪಿಗಳು ನೀಡಿದ್ದಾರೆ.
2 ಸಾವಿರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ಹಣವನ್ನು ವಸೂಲಿ ಮಾಡಿದ್ದಾರೆ. ಹಣ ವಾಪಸ್ ಕೇಳಿದರೆ ಪ್ರಭಾವಿಗಳ ಹೆಸರು ಹೇಳಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.