ಬಹುಭಾಷಾ ನಟಿ ಸ್ಮೃತಿ ಬಿಸ್ವಾಸ್ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ನಿನ್ನೆ ಗುರುವಾರದಂದು ಬೆಳಗ್ಗೆ 10 ಗಂಟೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿತು. ಹಿಂದಿ ಮತ್ತು ಬೆಂಗಾಲಿ ಚಿತ್ರಗಳಲ್ಲಿ ಅಪ್ರತಿಮ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಖ್ಯಾತ ನಟಿ ಸ್ಮೃತಿ ಬಿಸ್ವಾಸ್ ನಾರಂಗ್ ಅವರಿಗೆ ಬರೋಬ್ಬರಿ 100 ವರ್ಷ ವಯಸ್ಸಾಗಿತ್ತು.
ಈ ಹಿಂದೆ ಸಾಕಷ್ಟು ಸಂಪತ್ತನ್ನು ಹೊಂದಿರುವ ಮುಂಬೈನ ನಿವಾಸಿಯಾಗಿದ್ದ ನಟಿ ಸ್ಮೃತಿ ಅವರು ಸುಮಾರು 28 ವರ್ಷಗಳ ಹಿಂದೆಯೇ ನಾಸಿಕ್ ನಗರಕ್ಕೆ ಬಂದಿದ್ದರಂತೆ. ಅಲ್ಲಿ ಕ್ರಿಶ್ಚಿಯನ್ ಮಿಷನರಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸಹೋದರಿಯ ಜೊತೆಗೆ ವಾಸಿಸುತ್ತಿದ್ದರು ಮತ್ತು ಅಲ್ಲಿ ಇವರು ಒಂದು ಮನೆಯಲ್ಲಿ ವಾಸಿಸುತ್ತಿದ್ದರು ಅಂತ ಹೇಳಾಗುತ್ತಿದೆ.
ಸ್ಮೃತಿ ಅವರು ತಮ್ಮ 10ನೇ ವಯಸ್ಸಿನಲ್ಲಿ ಬಂಗಾಳಿ ಚಲನಚಿತ್ರ ಸಂಧ್ಯಾದಲ್ಲಿ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹೇಮಂತ್ ಬೋಸ್ ಅವರ ದ್ವಂದಾ ಮತ್ತು ಮೃಣಾಲ್ ಸೇನ್ ಅವರ ನೀಲ್ ಆಕಾಶೇರ್ ನೀಚೆ ಸೇರಿದಂತೆ ಕೋಲ್ಕತ್ತಾದಲ್ಲಿ ನಿರ್ಮಿಸಲಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದರು