ಬೆಂಗಳೂರು ಗ್ರಾಮಾಂತರ:– ಹೋಳಿ ಆಡಲು ಹೋಗಿದ್ದ ವ್ಯಕ್ತಿ ನಿಗೂಢ ಸಾವನ್ನಪ್ಪಿದ್ದು, ಮ್ಯಾನೇಜರ್ ಸಾವಿನ ಸುತ್ತಾ ಅನುಮಾನದ ಹುತ್ತಾ ಹುಟ್ಟುಕೊಂಡಿದೆ.
HD Kumaraswamy: ಕುಮಾರಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಶ್ರೀ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ಮ್ಯಾನೇಜರ್ ಸುನೀಲ್ ಮತ್ತು ಬಿಹಾರ ಮೂಲದ ಕಾರ್ಮಿಕರು ಹೋಳಿ ಆಡಿ ಸಂಭ್ರಮಿಸಿದ್ದರು. ಆದ್ರೆ, ಹೋಳಿ ಆಡಿದ ನಂತರ ತೋಟದ ಮ್ಯಾನೇಜರ್ ಸುನೀಲ್ ಮನೆಯತ್ತ ತೆರಳುವುದಾಗಿ ಹೇಳಿದ್ದು, ಮಧ್ಯರಾತ್ರಿ ಆದರೂ ಮನೆಗೆ ಹೋಗಿಲ್ಲ. ಹೀಗಾಗಿ ಸುನೀಲ್ ಎಷ್ಟೋತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಶಾಕ್ ಆಗಿ, ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದ್ರೆ, ಎಲ್ಲೂ ಕಾಣದಿದ್ದಾಗ ಬೆಳಗ್ಗೆ ತೋಟದ ಕೃಷಿ ಹೊಂಡದ ದಡದ ಮೇಲೆ ಯುವಕನ ಬಟ್ಟೆ ಚಪ್ಪಲಿ ಕಾಣಿಸಿದ್ದು, ಅನುಮಾನದ ಮೇಲೆ ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯುವಕನ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದ್ದು, ಕುಟುಂಬಸ್ಥರ ಜೊತೆಗೆ ಗ್ರಾಮಸ್ಥರು ಸಹ ಒಂದು ಕ್ಷಣ ಶಾಕ್ ಆಗಿದ್ದಾರೆ.
ಮೃತ ಯುವಕ ಸುನೀಲ್ ಈ ಹಿಂದೆಯೇ ಈಜು ಸಹ ಕಲಿತಿದ್ದು, ಗ್ರಾಮದಲ್ಲಿ ಎಲ್ಲರ ಜೊತೆ ಸ್ನೇಹ ಸೌಹರ್ದತೆಯಿಂದ ಹೊಂದಿಕೊಂಡು ಜೀವನ ನಡೆಸುತ್ತಿದ್ದನಂತೆ. ಜೊತೆಗೆ ಕೃಷಿ ಹೊಂಡದಲ್ಲಿ ಸಿಕ್ಕ ಮೃತದೇಹದ ಮೇಲೆ ಕಲೆ ಹಾಗೂ ಮುಖದ ತುಂಬಾ ಗಾಯದ ಗುರುತುಗಳು ಪತ್ತೆಯಾಗಿದ್ದು ಇದು ಆಕಸ್ಮಿಕ ಸಾವಲ್ಲ ಯಾರೋ ದುಷ್ಕ್ರರ್ಮಿಗಳು ಕೊಲೆ ಮಾಡಿ ನೀರಿಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.