ಬೆಂಗಳೂರು:- ಸೆಂಟ್ರಿಂಗ್ ಗೆ ಬಳಿಸುವ ಸಾರವೆ ಮರ ಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ವಿ ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಮಲಗುವಾಗ ಕೂದಲು ಫ್ರೀಯಾಗಿ ಬಿಡಬೇಕಾ? ಅಥವಾ ಜಡೆ ಹಾಕಬೇಕೇ! ನೀವು ತಿಳಿಯಲೇಬೇಕಾದ ವಿಚಾರ!
15 ವರ್ಷದ ತೇಜಸ್ವಿನಿ ಸಾವನ್ನಪ್ಪಿದ ಮಗು. ಮಧ್ಯಾಹ್ನ 12 : 40ಕ್ಕೆ ವಿ ವಿ ಪುರಂ ಮೆಟ್ರೋ ನಿಲ್ದಾಣ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುವ ವೇಳೆ ಘಟನೆ ಸಂಭವಿಸಿದೆ.
ಶನಿವಾರ ಇದ್ದ ಕಾರಣ ಮಧ್ಯಾಹ್ನ ಸ್ಕೂಲ್ ಮುಗಿಸಿ ಬಳಿಕ ಡ್ಯಾನ್ಸ್ ಕ್ಲಾಸ್ ಮುಗಿಸಿ ಮನೆಗೆ ಬರ್ತಿರೊ ವೇಳೆ ಘಟನೆ ಜರುಗಿದೆ. ಬಿಲ್ಡಿಂಗ್ ಕನ್ಸ್ಟ್ರಕ್ಷನ್ ನಡೆಯುತ್ತಿದ್ದ ನಾಲ್ಕನೇ ಪ್ಲೊರ್ ನಿಂದ ಸಾರವೆ ಮರ ಬಿದ್ದಿದೆ.
ಮೇಲಿಂದ ರಭಸವಾಗಿ ಬಿದಿದ್ದರಿಂದ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ. ವಿ ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.