ಬ್ರೆಡ್ ಸಾಮಾನ್ಯವಾಗಿ ನಮ್ಮೆಲ್ಲರಿಗೂ ಚಿರಪರಿಚಿತ.ಬಹಳ ಹಿಂದೆ ಆರೋಗ್ಯ ಸರಿಯಿಲ್ಲದಿದ್ದಾಗ, ಊಟವನ್ನು ಮಾಡಲು ಆಗದ ಪರಿಸ್ಥಿತಿಗಳಲ್ಲಿ ಬ್ರೆಡ್ಡನ್ನು ಸೇವಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಡಯಟ್ ಎನ್ನುವ ವಿಷಯದ ಹಿಂದೆ ಪ್ರತಿಯೊಬ್ಬರೂ ಬಿದ್ದಿದ್ದಾರೆ. ಬ್ರೆಡ್ ಅಥವಾ ಬ್ರೆಡ್ನ ಇನ್ನೀತರ ತಿಂಡಿ ತಿನ್ನಲು ಎಷ್ಟು ರುಚಿಕರವಾಗಿರುತ್ತವೆಯೋ ಅವುಗಳು ಆರೋಗ್ಯಕ್ಕೆ ಹಾನಿಕಾರಕವು ಹೌದು. ಬ್ರೆಡ್ ಪೊಟ್ಯಾಸಿಯಮ್ ಬ್ರೋಮೇಟ್ ಅನ್ನು ಹೊಂದಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಬಿಳಿ ಬ್ರೆಡ್ ಮಾಡುವುದು ಹೇಗೆ? ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಬಳಸಲಾಗುತ್ತದೆ. ಅವುಗಳನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ಬಿಳುಪುಗೊಳಿಸಲಾಗುತ್ತದೆ. ಪೆರಾಕ್ಸೈಡ್, ಕ್ಲೋರಿನ್ ಡೈಆಕ್ಸೈಡ್ ಮತ್ತು ಪೊಟ್ಯಾಸಿಯಮ್ ಬ್ರೋಮೇಟ್ ನಂತಹ ರಾಸಾಯನಿಕಗಳನ್ನು ಬ್ರೆಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬಿಳಿ ಬ್ರೆಡ್ ಸೇವಿಸಬಾರದು ಏಕೆ? ಪ್ರತಿಯೊಂದು ವಿಧದ ಬ್ರೆಡ್ನಲ್ಲಿಯೂ ಅದೇ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಬಿಳಿ ಬ್ರೆಡ್ ಸುಮಾರು 77 ಕ್ಯಾಲೊರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ: ಗ್ಲೈಮ್ಯಾಕ್ಸ್ನ ರೂಪವು ಬಿಳಿ ಬ್ರೆಡ್ನಲ್ಲಿ ಅಧಿಕವಾಗಿದೆ. ಅಂದರೆ ಅದು ಗ್ಲೂಕೋಸ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಅನೇಕ ರೋಗಗಳು ಸಂಭವಿಸುತ್ತವೆ.
ತೂಕ ಹೆಚ್ಚಳ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬ್ರೆಡ್ ಸೇವಿಸಬೇಡಿ. ವಾಸ್ತವವಾಗಿ ಬಿಳಿ ಬ್ರೆಡ್ ತ್ವರಿತವಾಗಿ ತೂಕವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಈ ಬ್ರೆಡ್ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುವುದಿಲ್ಲ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಬ್ರೆಟ್ ಸೇವಿಸುವ ಮುನ್ನ ಎಚ್ಚರಿಕೆ ವಹಿಸಿ.