ಬೆಂಗಳೂರು:- ಬ್ರ್ಯಾಂಡ್ ಬೆಂಗಳೂರು ನನ್ನ ಐಡಿಯ ಅಲ್ಲ ಎಂದು ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಯುವ ನಾಯಕತ್ವ ಸಮ್ಮೇಳನದಲ್ಲಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇದು ನನ್ನ ಐಡಿಯ ಅಂತಾ ಅಲ್ಲ. ಇಲ್ಲಿ ಮಕ್ಕಳ ಐಡಿಯಾ ಮುಖ್ಯವಾಗಿದೆ. ಊರಿಗೆ ಒಂದು ಹೆಸರು ಬರಬೇಕು. ಹೀಗಾಗಿ ಬೇರೆ ಬೇರೆ ಆಯಾಮಗಳಲ್ಲಿ ಹೆಸರು ಬರಬೇಕು ಎಂದರು.
ಬ್ರ್ಯಾಂಡ್ ಬೆಂಗಳೂರು ಯೋಜನೆ ಕುರಿತ ಐಡಿಯಾಥಾನ್ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು, ಹೊಸದೇನಾದರೂ ಅಪೇಕ್ಷೆ ಮಾಡಬೇಕು. ಸ್ಪಷ್ವವಾದ ವಿಚಾರ ಬೇಕು. ನನಗೆ ಬಹಳ ಸಂತೋಷ ಆಗುತ್ತದೆ. ಈ ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವನ್ನು ಮಾಡಲು ಎಲ್ಲಾ ಮಕ್ಕಳು ಕಷ್ಟಪಟ್ಟಿದ್ದಾರೆ. ಒಂದು ದಿನದಲ್ಲಿ ಮಾಡಲು ಸಾಧ್ಯವಿಲ್ಲ. ಬಹಳ ಸಂತೋಷ ಆಗಿದೆ. ಇಂತಹ ಕಾರ್ಯಕ್ರಮಗಳು ಬೇರೆಬೇರೆ ಊರುಗಳಲ್ಲೂ ಆಗಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಸುಧಾಮೂರ್ತಿ, ಬ್ರ್ಯಾಂಡ್ ಬೆಂಗಳೂರು ಅಂದರೆ ಕನ್ನಡ. ಇಂಗ್ಲೀಷ್ ಮಾತನಾಡಲು ಕನ್ನಡ ಬಿಡಬೇಡಿ. ಮಕ್ಕಳ ಮನಸ್ಸು ಯಾವುದೇ ಪೂರ್ವಪೀಡಿತವಾಗಿರುವುದಿಲ್ಲ. ಬ್ರೈಟ್ ಐಡಿಯಾ ಬರೋದೇ ಮಕ್ಕಳಿಂದ. ಹೀಗಾಗಿ ನಾನು ಪುಸ್ತಕ ಬರೆಯುವಾಗ ತಪ್ಪುಗಳಿದ್ದರೆ ತಿಳಿಸುವಂತೆ ಮಕ್ಕಳಿಗೆ ಹೇಳುತ್ತೇನೆ ಎಂದಿದ್ದರು.