ನಮ್ಮ ದೇಹದಲ್ಲಿ ಅತ್ಯಂತ ಮುಖ್ಯವಾದ ಅಂಗ ಎಂದರೆ ಮೆದುಳು ಎಂದು ನಿಸ್ಸಂದೇಹವಾಗಿ ಹೇಳಬಹುದು. ದೇಹದ ಪ್ರತಿಯೊಂದು ಕಾರ್ಯಕ್ಕೂ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಸಾಧಿಸುವುದೇ ಇದಕ್ಕೆ ಕಾರಣ. ಮಾನವನ ಮೆದುಳು ಜೀವನಪರ್ಯಂತ ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ಕಾರಣ ಈ ಮೆದುಳಿನ ಆರೋಗ್ಯ ಹಾಗೂ ನರ ವೈಜ್ಞಾನಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಮೆದುಳಿನ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ರೈತರೇ ನಿಮ್ಮ ಆಧಾರ್ ಕಾರ್ಡ್, ಜಮೀನು ಪಹಣಿ ಪರಿಶೀಲಿಸಿ, ಮೋಸ ಮಾಡೋರು ಇರ್ತಾರೆ!
ಆರೋಗ್ಯಕರ ಮೆದುಳಿಗೆ ಮೆದುಳಿನ ಆಹಾರಗಳೇ ಅತ್ಯುತ್ತಮ ಇಂಧನವಾಗಿದೆ. ಆರೋಗ್ಯಕರ ಮೆದುಳಿಗೆ ನಿಮ್ಮ ಆಹಾರಕ್ರಮದಲ್ಲಿ ನೀವು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಕೆಲವು ಮೆದುಳಿನ ಆಹಾರಗಳು ಇಲ್ಲಿವೆ
ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ
ಇಡೀ ದೇಹದ ಚಲನೆಯನ್ನು ನಿಯಂತ್ರಿಸುವ ಅಂಗವಾದ ಮೆದುಳನ್ನು ಆರೋಗ್ಯಯುತವಾಗಿರುವುದು ಬಹುಮುಖ್ಯ. ಹೀಗಾಗಿ ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇದು ಸಾಧ್ಯ.
* ಕೇಸುಗಡ್ಡೆಯು ವಿಟಮಿನ್ ಕೆ ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇದು ಮೆದುಳಿನ ಕೋಶಗಳನ್ನು ಆರೋಗ್ಯವಾಗಿರಿಸುತ್ತದೆ. ಮೆದುಳಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
* ಆಹಾರ ಪದ್ಧತಿಯಲ್ಲಿ ಮೀನುಗಳ ಸೇವನೆಯನ್ನು ಮಾಡುವುದು ಉತ್ತಮ. ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ನಿಮ್ಮ ಮೆದುಳನ್ನು ಆರೋಗ್ಯರಕವಾಗಿರುವಂತೆ ಮಾಡುತ್ತದೆ.
* ಅರಶಿನವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದ್ದು, ಮೆದುಳಿನ ಜೀವಕೋಶಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಈ ಅರಶಿನ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವ ಕಾರಣ ನೆನಪಿನ ಶಕ್ತಿ ಕಡಿಮೆಯಾಗುವುದು ಸೇರಿದಂತೆ ಇನ್ನಿತ್ತರ ಮೆದುಳಿಗೆ ಸಂಬಂಧಪಟ್ಟ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.