ಬೆಂಗಳೂರು: ವಸಂತಪುರ ಬಡಾವಣೆಯಲ್ಲಿರುವ ವಸಂತ ವಲ್ಲಭಸ್ವಾಮಿ ದೇವಾಲಯ ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದು. ಈ ದೇವಾಲಯ ವಿಜಯನಗರ ಕಾಲದ ವಾಸ್ತುವಾಗಿದೆ. ಇನ್ನೂ ಈ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವದ ಸಂಭ್ರಮವಾಗಿದ್ದು,
ಮುಜರಾಯಿ ಇಲಾಖೆ ಆಶ್ರಯದಲ್ಲಿ ನಡೆದ ಶ್ರೀ ವಸಂತವಲ್ಲಭರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಪರಿಷತ್ ಶಾಸಕ ಟಿಎ ಶರವಣ ಅವರು ಭಾಗಿಯಾಗಿದ್ದರು. ಪ್ರತಿ ವರ್ಷದಂತೆ ರಥ ಮತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.
Immunity Power: ಈ ಆಹಾರಗಳನ್ನು ತಿಂದ್ರೆ ಸಾಕು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ..!
ಭಕ್ತರು ರಥಕ್ಕೆ ಬಾಳೆ ಹಣ್ಣು ಸಮರ್ಪಿಸಿ ಇಷ್ಟಾರ್ಥ ಸಿದ್ಧಿಯನ್ನು ಕೋರಿಕೊಂಡರು. ಅದರಂತೆ ಪರಿಷತ್ ಶಾಸಕ ಟಿಎ ಶರವಣ ಅವರು ಕೂಡ ನಾಡಿನ ಒಳಿತಿಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಸಂಸದರಾದ ಡಾ. ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಶಾಸಕರಾದ ಕೃಷ್ಣಪ್ಪ ಅವರು ಪರಿಷತ್ ಶಾಸಕ ಟಿಎ ಶರವಣ ಅವರಿಗೆ ಸಾಥ್ ನೀಡಿದರು.