ದೇವನಹಳ್ಳಿ : ಯಾವುದೇ ಬಿಪಿಎಲ್ ಕಾರ್ಡ್ ರದ್ಧಾಗಿಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಸ್ಪಷ್ಟನೆ ಕೊಟ್ಟರು. ಬಿಪಿಎಲ್ ಕಾರ್ಡ್ ರದ್ದಾಗಿಲ್ಲ, ಎಪಿಎಲ್ ಕಾರ್ಡ್ ಕೂಡ ರದ್ದಾಗಿಲ್ಲ. ಬಿಜೆಪಿಯವರು ರಾಜಕೀಯ ಮಾಡಲು ಗೊಂದಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು..
ರೈತರೇ ಗಮನಿಸಿ.. ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!
ರಾಜ್ಯದ ದಕ್ಷಿಣ ಭಾಗದಲ್ಲಿ ಬಿಪಿಎಲ್ ಕಾರ್ಡ್ ಶೇ. 80ರಷ್ಟು ಇವೆ. ಇದರಲ್ಲಿ ಕೆಲವರು ಬಿಪಿಎಲ್ ಕಾರ್ಡ್ʼಗೆ ಅರ್ಹರಲ್ಲದವರು ಇದ್ದಾರೆ. ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲದವರನ್ನ ಎಪಿಎಲ್ ಗೆ ಹಾಕುತ್ತೇವೆ. ಯಾರು ತೆರಿಗೆ ಪಾವತಿ ಮಾಡುತ್ತಾರೋ ಅಂತವರನ್ನು ಎಪಿಎಲ್ ಕಾರ್ಡ್ ಗೆ ಬದಲಿಸುತ್ತೇವೆ. ಆದರೇ ಇವರನ್ನ ರದ್ದು ಮಾಡೋದಿಲ್ಲ ಎಂದರು. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಶೇ 50ರಷ್ಟು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಆದರೇ ಕರ್ನಾಟಕದಲ್ಲಿ ಮಾತ್ರ ಶೇ 80ರಷ್ಟು ಬಿಪಿಎಲ್ ಕಾರ್ಡ್ʼಗಳು ಹೊಂದಿದ್ದಾರೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದರು.