ಸ್ಟಾರ್ ಕಲಾವಿದರ ಪೈಕಿ ಬಾಲಿವುಡ್ನ ಹಾಟ್ ನಟಿ ಕಂಗನಾ ರಣಾವತ್ ಕೂಡ ಒಬ್ಬರು.
ಕೆಲವು ದಿನಗಳ ಹಿಂದೆಯಷ್ಟೇ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಎಂದು ಹೇಳಿದ್ದ ಕಂಗನಾ, ತಮ್ಮ ಹೇಳಿಕೆಗೆ ಪುಷ್ಟಿ ನೀಡುವಂತೆ ಅನಾಮಧೇಯ ವ್ಯಕ್ತಿಯ ಕೈಹಿಡಿದು, ಜತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ಇದೀಗ ಒಂದೇ ಹೇಳಿಕೆಯಲ್ಲಿ ಉತ್ತರ ಕೊಟ್ಟಿದ್ದಾರೆ.
ನೀವು ಫೋಟೋದಲ್ಲಿ ನೋಡಿದ ವ್ಯಕ್ತಿ ನನ್ನ ಬಾಯ್ಫ್ರೆಂಡ್ ಅಲ್ಲ! ಆತ ನನ್ನ ಹೇರ್ ಸ್ಟೈಲಿಸ್ಟ್. ನಿನ್ನೆಯಿಂದ ನನಗೆ ಹಲವಾರು ದೂರವಾಣಿ ಕರೆ ಮತ್ತು ಸಂದೇಶಗಳು ಬಂದಿವೆ. ಎಲ್ಲರೂ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗಳನೇ ಕೇಳಿದ್ದಾರೆ. ನಾನು ಆಗಾಗ್ಗೆ ಸಲೂನ್ಗೆ ಹೋಗ್ತೀನಿ, ಇದನ್ನು ಬೇರೆ ರೀತಿ ತೋರಿಸಲಾಗುತ್ತಿದೆ. ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಹೊರಗೆ ಓಡಾಡಿದರೆ ಅವರು ಸಹೋದ್ಯೋಗಿಗಳು, ಸ್ನೇಹಿತರು ಆಗಿರಬಹುದು. ಅದನ್ನು ತಿಳಿಯದೆ ಅನ್ಯರ್ಥಗಳನ್ನು ಕಲ್ಪಿಸಬಾರದು’ ಎಂದು ಹೇಳಿದ್ದಾರೆ