ದಕ್ಷಿಣ ಭಾರತದ ನಟಿ ನಿವೇತಾ ಪೇತುರಾಜ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಖಾಸಗಿ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇದೀಗ ತನಗೆ ಬಾಯ್ಫ್ರೆಂಡ್ ಮಾಡಿದ ಮೋಸವನ್ನು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಾವು ಏನಾದರೂ ನೆಗೆಟಿವ್ ಆಗಿ ಯೋಚಿಸಿದರೆ ಅದು ಸಂಭವಿಸುತ್ತದೆ. ನನ್ನ ಗೆಳೆಯ ನನಗೆ ಮೋಸ ಮಾಡುತ್ತಾನೆ ಎಂದು ಭಾವಿಸಿದೆ. ಅದೇ ಸಂಭವಿಸಿತು. ಆತ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜೊತೆ ಹೋಗಿದ್ದಾನೆ ಎಂದು ಬೇಸರದಿಂದ ನಟಿ ನಿವೇತಾ ಹೇಳಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಬಹುಬಾಷಾ ನಟಿ ನಿವೇತಾ ಪೇತುರಾಜ್ ಮೂಲತಃ ಕಾಲಿವುಡ್ ಸಿನಿರಂಗದವರು, ಅದ್ರೆ ಈ ಚೆಲುವೆಗೆ ಅಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ. ಮಧುರೈನಲ್ಲಿ ಜನಿಸಿದ ನಟಿ ತಮಿಳಿನ ‘ಒರು ನಾಳ್ ಕೂತು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅದರ ನಂತರ, ಅವರು ಉದಯನಿಧಿ ಸ್ಟಾಲಿನ್ ಜೊತೆ ಎಮ್ಮನಸು ತಂಗಂ, ಜಯಂ ರವಿ ಜೊತೆ ದಿಕ್ ದಿಕ್ ದಿಕ್, ವಿಜಯ್ ಆಂಟನಿ ಜೊತೆ ತಿಮಿರು ಪುಟಿಚವನ್ ಮತ್ತು ವಿಜಯ್ ಸೇತುಪತಿ ಜೊತೆ ಸಂಗತ್ ತಮಿಳನ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಸ್ಟಾರ್ ನಟರ ಜೊತೆ ಸತತವಾಗಿ ಹಿಟ್ ಚಿತ್ರಗಳಲ್ಲಿ ನಟಿಸಿದರೂ ಈ ಸುಂದರಿಗೆ ತಮಿಳು ಸಿನಿರಂಗದಲ್ಲಿ ಅಷ್ಟಾಗಿ ಆಫರ್ ಬರುತ್ತಿಲ್ಲ. ಇದರಿಂದ ಅಲರ್ಟ್ ಆದ ನಿವೇತಾ ಟಾಲಿವುಡ್ ಕಡೆ ಕಾಲಿಟ್ಟರು. ʼಮೆಂಟಲ್ ಮದಿಲೋʼ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ, ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆದವು. ಅಲ್ಲು ಅರ್ಜುನ್ ಜೊತೆ ಅಲವೈಕುಂಠಪುರಮುಲು ಮತ್ತು ರೆಡ್ನಂತಹ ಹಿಟ್ ಮೂವಿಸ್ಗಳ ಮೂಲಕ ನಿವೇತಾ ಪೇತುರಾಜ್ ಸೌತ್ ಸಿನಿರಂಗದಲ್ಲಿ ಜನಪ್ರಿಯರಾದರು.
![](https://ainlivenews.com/wp-content/uploads/2024/01/Ad-Banner-copy-scaled.jpg)