ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಾಗ ಚೈತನ್ಯ ಹಾಗೂ ಸಮಂತಾ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದರು. ಇಬ್ಬರು ಏ ಮಾಯ ಚೇಸಾವೆ ಸಿನಿಮಾ ಮೂಲಕ ಪರಿಚಿತರಾಗಿ ಹಿಟ್ ಮೂವಿ ಕೊಟ್ಟು ಆ ನಂತರ ಸ್ನೇಹಿತರಾಗಿದ್ದರು. ಪರಸ್ಪರ ಪ್ರೀತಿಸಲಾರಂಭಿಸಿ ನಂತರ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು
ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ನಟ ದರ್ಶನ್ ಬೇಲ್ ಭವಿಷ್ಯ ನಿರ್ಧಾರ?
ಮಾಜಿ ಸಂಗಾತಿ ಸಮಂತಾ ರುತ್ ಪ್ರಭು ಜೊತೆಗಿನ ಡಿವೋರ್ಸ್ ಕುರಿತು ಮಾತನಾಡಿದ ನಾಗ ಚೈತನ್ಯ ಅವರು ನಾವು ಪರಸ್ಪರ ತುಂಬಾ ಗೌರವದಿಂದ ಬೇರ್ಪಟ್ಟಿದ್ದೆವು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ಮೂಲಕ ಯಾವುದೇ ಕೆಟ್ಟ ಆರೋಪ-ಪ್ರತ್ಯಾರೋಪ, ಚೀಪ್ ಗಿಮಿಕ್, ಜಗಳಗಳು ಇರಲಿಲ್ಲ ಎಂದು ನಾಗ ಚೈತನ್ಯ ಅವರು ರಿವೀಲ್ ಮಾಡಿದ್ದಾರೆ.
ಆದರೆ ಇತ್ತೀಚೆಗೆ ಕೊಂಡ ಸುರೇಖಾ ಅವರ ಹೇಳಿಕೆಗಳಿಗೆ ರಿಯಾಕ್ಟ್ ಮಾಡುವಾಗ ನಾಗ ಚೈತನ್ಯ ಅನಿವಾರ್ಯವಾಗಿ ಡಿವೋರ್ಸ್ ಕುರಿತ ಕೆಲವೊಂದು ವಿಚಾರಗಳನ್ನು ರಿವೀಲ್ ಮಾಡಿದ್ದರು. ಆ ವೇಳೆ ನಾಗ ಚೈತನ್ಯ ಪರೋಕ್ಷವಾಗಿ ಡಿವೋರ್ಸ್ ಕಾರಣ ಹಾಗೂ ಇತರ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ