ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೀಪ್ ಕಮಿಷನರ್ ಕಚೇರಿ ಮೇಲೆ ಬೆಳಗ್ಗೆ 11 ಗಂಟೆ ವೇಳಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಳು ಜನ ಇಡಿ ಅಧಿಕಾರಿಗಳ ತಂಡದಿಂದ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಗೆ ಡ್ರಿಲ್ ನಡೆಯುತ್ತಿದೆ.
ತುಳಸಿ ಗಿಡದ ಪಕ್ಕ ಈ ವಸ್ತು ಇಡಬೇಡಿ: ಶ್ರೀಮಂತನೂ ಕೂಡ ಕಡುಬಡವನಾಗುತ್ತಾನೆ!
ಬೆಂಗಳೂರು ವ್ಯಾಪ್ತಿಯಲ್ಲಿ 2016ರಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ ವೆಲ್ ನಲ್ಲಿ 9000 ಕೋಟಿ ಹಗರಣದ ಆರೋಪ ಕೇಳಿಬಂದಿದೆ. ಈ ಬೋರ್ ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿದೆ. ಹಗರಣಕ್ಕೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಏನಿದು ಬಿಬಿಎಂಪಿ ಬೋರ್ ವೆಲ್ ಹಗರಣ !?
2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ 9,558 ಕೊಳವೆ ಬಾವಿಗಳನ್ನ ಕೊರೆಯಲು ಶುರು ಮಾಡಿದ್ದ ಪಾಲಿಕೆ ಆ ಬಳಿಕ 976 ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಲೆಕ್ಕ ಕೊಟ್ಟಿದ್ದ ಬಿಬಿಎಂಪಿ ಅಧಿಕಾರಿಗಳು ಆದ್ರೆ 9,588 ಕೊಳವೆಬಾವಿಗಳಲ್ಲಿ 10% ಕೊಳವೆಬಾವಿಗಳ ದಾಖಲೆ ಕೊಡಲು ಪಾಲಿಕೆ ಅಧಿಕಾರಿಗಳಿಗ ವಿಫಲರಾಗಿದ್ದರು.
ಪಾಲಿಕೆ ವ್ಯಾಪ್ತಿಯ ವಿವಿಧ ಕಡೆ ಒಟ್ಟು 9,558 ಕೊಳವೆ ಬಾವಿ ಕೊರೆಯುವ ಯೋಜನೆ
- ಒಂದು ಆರ್ ಓ ಪ್ಲಾಂಟ್ ಗೆ 25 ರಿಂದ 28 ಲಕ್ಷ ರೂಪಾಯಿ ಬಿಲ್
- 100 ಅಡಿ ಆಳ ಕೊಳವೆಬಾವಿಗೆ 2 ಸಾವಿರ ಅಡಿ ಕೊರೆಯಲಾಗಿದೆ ಎಂದು ಲೆಕ್ಕ
- ಈ ಯೋಜನೆಗೆ 956 ಕೋಟಿ ರೂಪಾಯಿ ಬಿಲ್ ಕ್ಲೈಮ್ ಮಾಡಿದ್ದ ಬಿಬಿಎಂಪಿ ಇಂಜಿನಿಯರ್ ಚೀಫ್ ಪ್ರಹ್ಲಾದ್
- ಆದರೆ ಅಷ್ಟೊಂದು ಪ್ರಮಾಣದಲ್ಲಿ ದಾಖಲೆ ನೀಡಲು ವಿಫಲ ಆಗಿರುವ ಪಾಲಿಕೆ ಅಧಿಕಾರಿಗಳು
- ಈ ಸಂಬಂಧ ಪಾಲಿಕೆಯ 25ಕ್ಕೂ ಅಧಿಕ ಅಧಿಕಾರಿಗಳಿಗೆ ಇಡಿ ನೋಟೀಸ್ ಈ ಹಿಂದೆ ನೀಡಿತ್ತು
- ಕೊಳವೆ ಬಾವಿ ಕೊರೆಸದೆ ಬಿಲ್ ನಲ್ಲಿ ಗೋಲ್ಮಾಲ್
- ಈ ಬಗ್ಗೆ 2019ರಲ್ಲಿ ACBಗೆ ದೂರು ನೀಡಿದ್ದ ಬಿಜೆಪಿ ಮುಖಂಡ ಎನ್.ಆರ್ ರಮೇಶ್
- ಬಳಿಕ ಎಸಿಬಿ ಮುಚ್ಚಿದ ಮೇಲೆ ಲೋಕಾಯುಕ್ತಕ್ಕೆ ಪ್ರಕರಣ ವರ್ಗ
- 2022ಲ್ಲಿ ಮೊತ್ತದ ಪ್ರಮಾಣ ನೋಡಿ ಪ್ರಕರಣ ಇಡಿಗೆ ವರ್ಗ ಮಾಡಿದ್ದಲೋಕಾಯುಕ್ತ