ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹಾರಿದೆ.
IPL 2025: ಫ್ಯಾನ್ಸ್ ಗೆ ಗುಡ್ ನ್ಯೂಸ್: RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ ನೋಡಿ!
ಆದರೆ ತಂಡ ಬಿಟ್ಟು ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋಗಿದ್ದಾರೆ. ಎರಡು ಬ್ಯಾಚ್ಗಳಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ವಿರಾಟ್ ಕೊಹ್ಲಿ ಈ ಎರಡು ಬ್ಯಾಚ್ಗಳನ್ನು ಬಿಟ್ಟು ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ. ಹೌದು, ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳೊಂದಿಗೆ ಕೊಹ್ಲಿ ಕಾಣಿಸಿಕೊಂಡಿದ್ದರು. ಬಹುಶಃ ಕುಟುಂಬ ಸಮೇತರಾಗಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಕ್ಕೆ ಹಾರಿದ್ದು, ಭಾನುವಾರ ಸಂಜೆಯೇ ಆಸ್ಟ್ರೇಲಿಯಾ ತಲುಪಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸ ಅವರ ಟೆಸ್ಟ್ ವೃತ್ತಿಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಏಕೆಂದರೆ ಟೆಸ್ಟ್ ಮಾದರಿಯಲ್ಲಿ ಕೊಹ್ಲಿ ಬ್ಯಾಟ್ ಸದ್ದು ಮಾಡುತ್ತಿಲ್ಲ. ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ, ವಿರಾಟ್ ಕೇವಲ ಒಂದು ಅರ್ಧಶತಕವನ್ನು ಬಾರಿಸಿದ್ದನ್ನು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ನಿರಸ ಪ್ರದರ್ಶನ ನೀಡಿದ್ದರು. ಕೊನೆಯ ಟೆಸ್ಟ್ ಸರಣಿಯಲ್ಲಿ, ಟೀಂ ಇಂಡಿಯಾ ತನ್ನ ಸ್ವಂತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋತಿದೆ.
ಇದೀಗ ವಿರಾಟ್ ಕೊಹ್ಲಿ ಮೇಲೂ ಪ್ರಶ್ನೆಗಳು ಎದ್ದಿವೆ. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ವಿರಾಟ್ ಅವರಂತೆ ಯಾವುದೇ ಆಟಗಾರರು ಪ್ರದರ್ಶನ ನೀಡಿದ್ದರೆ ಅವರು ತಂಡದಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದೀಗ ವಿರಾಟ್ ಈ ಟೀಕೆಗಳೊಂದಿಗೆ ಆಸ್ಟ್ರೇಲಿಯಾ ತಲುಪಿದ್ದು, ಟೀಕಾಕಾರರ ಬಾಯಿ ಮುಚ್ಚಿಸುವುದು ಮತ್ತು ಟೀಂ ಇಂಡಿಯಾವನ್ನು ಗೆಲ್ಲಿಸುವುದು ಅವರ ಏಕೈಕ ಗುರಿಯಾಗಿದೆ.