ಹಾವೇರಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಹೆಸರು ಕೇಳಿಬರ್ತಿದೆ. ಇದರ ಮಧ್ಯೆಯೇ ಬಸವರಾಜ್ ಬೊಮ್ಮಾಯಿ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನದ ಸುಳಿವು ಬಿಟ್ಟು ಕೊಟ್ಟಂತಿದೆ. ಹಾವೇರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿ ಬರ್ತಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ನಿಮ್ಮ ಹೆಸರು ಕೇಳಿ ಬರುತ್ತೆ. ಅದೆಲ್ಲಾ ಎನು ಮಹತ್ವ ಅಲ್ಲಾ, ನಾನೇನು ಆಕಾಂಕ್ಷೆಯಲ್ಲ. ಆದರೆ ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ. ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಶಕ್ತಿಯಿದೆ, ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತೆ. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲಾ,ಎಲ್ಲರೂ ಸೇರಿ ಮಾಡಿದಾಗ ಶಕ್ತಿ ಬರುತ್ತೆ ಎಂದರು. ಬಿಜೆಪಿ ಜನ ಮಾನಸದಲ್ಲಿ ಇರುವಂತ ಪಕ್ಷ, ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಇಂತಹ ಸಮಯದಲ್ಲಿ ಸೌಹಾರ್ದತೆಯಿಂದ ಪಕ್ಷದ ಹಿರಿಯರು ಮಾರ್ಗದರ್ಶನ ಮಾಡಿದರೆ, ಕಿರಿಯರು ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಮೇಲಿಂದ ಶಿವರಾಜ ಸಿಂಗ್ ಚೌಹಾಣ್ ಬರುತ್ತಾರೆ, ಅವರ ಮಾರ್ಗದರ್ಶನದಲ್ಲಿ ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದರು
ಶ್ರೀರಾಮುಲು ಸುದ್ದಿಗೋಷ್ಠಿ ನಡುವೆ ಹೈಕಮಾಂಡ್ ಕಾಲ್ ; ಆಮೇಲೆ ಏನಾಯ್ತು..?
ಇನ್ನೂ ಶ್ರೀರಾಮುಲು-ರೆಡ್ಡಿ ವಾಕ್ ಸಮರ ವಿಚಾರಕ್ಕೆ ಮಾತನಾಡಿ, ರಾಮುಲು ಹಾಗೂ ರೆಡ್ಡಿ ಅವರು ನಮ್ಮಕ್ಕಿಂತಾ,ನಿಮ್ಮಕಿಂತ ಹಳೆಯ ಆತ್ಮೀಯ ಸ್ನೇಹಿತರು. ನಮ್ಮ ಆತ್ಮೀಯ ಸ್ನೇಹಿತರಲ್ಲಿ ಒಮ್ಮೊಮ್ಮೆ ಗ್ಯಾಪ್ ಬರುತ್ತೇ,ಸ್ನೇಹ ಅಂತಿಮವಾಗಿ ಗೆಲ್ಲುತ್ತೆ. ಇದೆಲ್ಲಾ ಸರಿಯಾಗುತ್ತೆ, ಸಾಯಂಕಾಲ ಜನಾರ್ದನ ರೆಡ್ಡಿ ಹತ್ರ ಮಾತಾಡ್ತೇನೆ. ನಾವು ಪಕ್ಷದ ದೃಷ್ಟಿಯಿಂದ ಇಬ್ಬರ ಹತ್ರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದರು.