ನವದೆಹಲಿ:- ದೆಹಲಿಯಲ್ಲಿ ಮತ್ತೆರಡು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಯೂರ್ ವಿಹಾರ್ 1ನೇ ಹಂತದಲ್ಲಿರುವ ಅಹ್ಲ್ಕಾನ್ ಇಂಟರ್ನ್ಯಾಷನಲ್ ಸ್ಕೂಲ್ ಗಳಿಗೆ ಇಮೇಲ್ಗಳು ಬಂದಿವೆ.
ಮುಡಾ ಹಗರಣ ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ ನಕಾರ ; ದೂರುದಾರರ ನಡೆ ಏನು..?
ಬೆದರಿಕೆ ಸಂದೇಶ ಬರುತ್ತಿದ್ದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಕಳುಹಿಸದಂತೆ ಎಲ್ಲಾ ಪೋಷಕರಿಗೆ ಸಂದೇಶ ಕಳುಹಿಸಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕಾಗಮಿಸಿದ ಶ್ವಾನದಳ, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಶೋಧಕಾರ್ಯ ನಡೆಸಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.