ಅಮರಾವತಿ:- ತಿರುಪತಿಯ 3 ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಕೂಡಲೇ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ನೊಂದಿಗೆ ಹೊಟೇಲ್ಗಳಲ್ಲಿ ಶೋಧ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ
ಬೆದರಿಕೆ ಇಮೇಲ್ ಕೇವಲ ವದಂತಿ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇದು ಕೇವಲ ಜನರನ್ನು ಆತಂಕಕ್ಕೊಳಪಡಿಸಲು ಈ ರೀತಿ ಮಾಡಿದ್ದಾರೆ. ಪೊಲೀಸರು ಈಗ ಇಮೇಲ್ ಕಳುಹಿಸಿರುವವರ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಅಲ್ಲದೇ ಹೋಟೆಲ್ಗಳಿಗೆ ಭೇಟಿಕೊಟ್ಟವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಇಮೇಲ್ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಅರೆಸ್ಟ್ ಆದ ಮಾದಕವಸ್ತುಗಳ ಜಾಲದ ಕಿಂಗ್ಪಿನ್ ಜಾಫರ್ ಸಿದ್ದಿಕ್ ಹೆಸರು ಇದೆ ಎಂದು ಹೇಳಲಾಗಿದೆ.