ಮುಂಬೈ:- ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
R Ashok: ನುಂಗುಬಾಕರನ್ನು ಸರ್ಕಾರ ಬೆಂಬಲಿಸುತ್ತಿದೆ: ವಿಪಕ್ಷ ನಾಯಕ ಆರ್ ಆರ್ ಅಶೋಕ್ ಕಿಡಿ!
35 ವರ್ಷದ ಜಗದೀಶ್ ಉಯ್ಕೆ ಬಂಧಿತ ಆರೋಪಿ. ಆತ ವಿಮಾನಗಳಿಗೆ ಬಾಂಬ್ ಬೆದರಿಕೆ ಪ್ರಕರಣ ಹಿಂದೆ ಇದ್ದಾನೆ. ಆತ ಹಿಂದೆ ಭಯೋತ್ಪಾದನೆಯ ಬಗ್ಗೆ ಪುಸ್ತಕ ಬರೆದಿದ್ದ. ಅಲ್ಲದೇ 2021 ರಲ್ಲಿ ಪ್ರಕರಣ ಒಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಇಮೇಲ್ಗಳು ಪತ್ತೆಯಾದ ನಂತರ ಅವನನ್ನು ಗುರುತಿಸಲಾಗಿದೆ. ತನಿಖೆ ಬಳಿಕ ಇಮೇಲ್ಗಳಿಗೆ ಇಂಗ್ಲೆಂಡ್ನ ಲಿಂಕ್ ಮಾಡುವ ಮಾಹಿತಿ ಲಭ್ಯವಾಗಿತ್ತು. ಆತ ಪ್ರಧಾನ ಮಂತ್ರಿಗಳ ಕಚೇರಿ, ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ವಿಮಾನಯಾನ ಕಚೇರಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ರೈಲ್ವೆ ರಕ್ಷಣಾ ಪಡೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಇಮೇಲ್ ಕಳುಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.