ಸಿನಿಮಾರಂಗದಲ್ಲಿ ನಟಿಯರು ಎದುರಿಸುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಓಪನ್ ಆಗಿ ಹೇಳಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ಲಕ್ಷ್ಮಿ ರೈ ತಮಗಾದ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’ ಸಿನಿಮಾದಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ ಕೂಡ ಕಾಸ್ಟಿಂಗ್ ಬಗ್ಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಹೀರೋ ಜೊತೆ ನೀವು ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದರು. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಎಂದರೆ ಏನು ಅರ್ಥವಾಗಿಲ್ಲ ಎಂದು ಫೋನ್ ಇಟ್ಟಿದ್ದೆ.
23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಹಿಂದಿ ಸ್ಟಾರ್ ನಟನೊಬ್ಬ ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಈಗಾಗಲೇ ಹಲವು ನಾಯಕಿಯರ ಜೊತೆ ತಳುಕು ಹಾಕಿಕೊಂಡಿದೆ ಎಂದಿದ್ದಾರೆ. ಆದರೆ ಆತ ಯಾರು ಅನ್ನೋದನ್ನು ಮಾತ್ರ ನಟಿ ರಿವೀಲ್ ಮಾಡಿಲ್ಲ.
1997ರಲ್ಲಿ ತೆರೆಕಂಡ ‘ವೈಫ್ ಆಫ್ ವರಪ್ರಸಾದ್’ ಎಂಬ ತೆಲುಗು ಸಿನಿಮಾದಲ್ಲಿ ಇಶಾ ಮೊದಲ ಬಾರಿಗೆ ಅತಿಥಿ ಪಾತ್ರ ಮಾಡಿದರು. ಆನಂತರ ತೆಲುಗಿನ ‘ಚಂದ್ರಲೇಖಾ’ ಸಿನಿಮಾಗೆ ನಾಯಕಿಯಾದರು. ಬಳಿಕ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಫೇಮಸ್ ಆದರು. ಇಲ್ಲಿ ಯಶಸ್ಸು ಪಡೆದುಕೊಂಡ ಮೇಲೆ 2000ರಲ್ಲಿ ತೆರೆಕಂಡ ‘ಪಿಝಾ’ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಬಾಲಿವುಡ್ನಲ್ಲಿ ಕಾಣಿಸಿಕೊಂಡರು. ಆ ಬಳಿಕ ಬಾಲಿವುಡ್ ನ ಹೆಚ್ಚಿನ ಸಿನಿಮಾಗಳಲ್ಲಿ ಇಶಾ ಕಾಣಿಸಿಕೊಳ್ಳಲಿಲ್ಲ.