ಬಾಲಿವುಡ್ ಖ್ಯಾತ ನಟ ಜಾನ್ ಅಬ್ರಹಾಂ ತಮ್ಮದೇ ಬ್ರಾಂಡ್ನ ಮೋಟಾರ್ ಸೈಕಲ್ ಹೆಲ್ಮೆಟ್ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಈ ಸುದ್ದಿಯನ್ನು ಸ್ವತಃ ನಟ ಸ್ಪಷ್ಟಪಡಿಸಿದ್ದಾರೆ. ಈ ಪ್ರಾಡಕ್ಟ್ ಮೂಲಕ ಸುರಕ್ಷತೆಗೆ ಆದ್ಯತೆ ನೀಡುವುದು ನನ್ನ ಅಂತಿಮ ಗುರಿಯಾಗಿದೆ ಎಂದು ಹೇಳಿದ್ದಾರೆ.
“ನನ್ನ ಉದ್ದೇಶ ತುಂಬಾ ಸರಳವಾಗಿದೆ. ನನ್ನ ಉದ್ದೇಶ ಸುರಕ್ಷತೆಯಾಗಿದೆ. ನಾನು ಉತ್ತಮವಾದ ಹೆಲ್ಮೆಟ್ ಖರೀದಿಸುವುದಕ್ಕಿಂತ ಸುರಕ್ಷಿತ ಹೆಲ್ಮೆಟ್ ಅನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಮಾಣೀಕರಣ ನೀಡಲು ಯೋಚಿಸುತ್ತಿದ್ದೇನೆ‘‘ ಎಂದಿದ್ದಾರೆ.
ಆಟೋಕಾರ್ ಇಂಡಿಯಾ ವರದಿಯ ಪ್ರಕಾರ, ಜಾನ್ ಅತ್ಯಾಸಕ್ತಿಯ ಮೋಟಾರ್ಸೈಕ್ಲಿಸ್ಟ್ ಮತ್ತು ಹೆಲ್ಮೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ. ನನಗೆ ಹೆಲ್ಮೆಟ್ ಎಂದರೆ ತುಂಬಾ ಇಷ್ಟವಾಗಿದ್ದು, ಜನರು ಬಟ್ಟೆ ಕೊಳ್ಳುವ ರೀತಿಯಲ್ಲೇ ನಾನೂ ಹೆಲ್ಮೆಟ್ ಖರೀದಿಸುತ್ತೇನೆ ಎಂದಿದ್ದಾರೆ. ಉತ್ಪಾದನಾ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸ್ಪೇನ್ ಮತ್ತು ಇಟಲಿಯ ಕೆಲವು ಉನ್ನತ ಮೋಟಾರ್ಸೈಕಲ್ ಹೆಲ್ಮೆಟ್ ಕಾರ್ಖಾನೆಗಳಿಗೆ ಭೇಟಿ ನೀಡಿದ್ದೇನೆ ಎಂದು ಜಾನ್ ತಿಳಿಸಿದ್ದಾರೆ.
ಹೆಲ್ಮೆಟ್ ಬಹು ಶೆಲ್ ಗಾತ್ರಗಳ ಬಳಕೆ ಒಳಗೊಂಡಂತೆ ಎಲ್ಲರಿಗೂ ಸೌಕರ್ಯಗಳಿಗೆ ಆದ್ಯತೆ ನೀಡುತ್ತದೆ ಎಂದು ಹೇಳಿರುವ ಜಾನ್ ಅಬ್ರಹಂ, ಈ ವ್ಯವಹಾರಕ್ಕೆ ಬರಲು ಕಾರಣವನ್ನು ತಿಳಿಸಿದ್ದಾರೆ. ಇದು ತನ್ನ ವೃತ್ತಿ ಎಂದು ಭಾವಿಸುತ್ತಾನೆ ಎಂದರು. ವಿಶೇಷವಾಗಿ 2004 ರಲ್ಲಿ ಧೂಮ್ ಚಿತ್ರ ಬಿಡುಗಡೆಯಾದಾಗಿನಿಂದ ಜಾನ್ ಅವರ ಹೆಸರು ಯಾವಾಗಲೂ ಭಾರತದಲ್ಲಿ ಸೂಪರ್ ಬೈಕ್ಗಳೊಂದಿಗೆ ಸಂಬಂಧಿಸಿರುವುದು ಗಮನಾರ್ಹ ವಾಗಿದೆ.