ಮಂಡ್ಯ : ಮದ್ದೂರು ಪಟ್ಟಣದ ಕೊಲ್ಲಿ ವೃತ್ತದ ಸಮೀಪದ ಶಿಂಷಾ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಶನಿವಾರ ಬೆಳಗಿನ ಜಾವ ಪತ್ತೆಯಾಗಿದೆ.
ಸುಮಾರು 35 ರಿಂದ 40 ವರ್ಷ ವಯಸ್ಸಿನ ಪುರುಷನ ಶವವಾಗಿದ್ದು, ಶವವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ನದಿ ದಡದಲ್ಲಿರುವುದನ್ನು ಕಂಡ ಸ್ಥಳೀಯರು ಮದ್ದೂರು ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೋಲೀಸರು ಮೃತದೇಹವನ್ನು ಹೊರ ತೆಗೆದಿದ್ದಾರೆ.
ಮೃತ ವ್ಯಕ್ತಿಯ ಮೈಮೇಲೆ ಹಳದಿ ಬಣ್ಣದ ನಿಕ್ಕರ್, ಕಪ್ಪುಬಣ್ಣದ ಶರ್ಟ್ ಧರಿಸಿದ್ದಾನೆ. ಯಾವುದಾದರೂ ಪೋಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದಲ್ಲಿ ಮದ್ದೂರು ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೋಲೀಸರು ಮನವಿ ಮಾಡಿದ್ದಾರೆ.