ಬೆಂಗಳೂರು:- ದೇಶದಾದ್ಯಂತ ನೂತನ ಕ್ರಿಮಿನಲ್ ಕಾನೂನು ಜಾರಿ ಬೆನ್ನಲ್ಲೇ ಕರ್ನಾಟಕದಲ್ಲಿ BNS ಪ್ರಕರಣ ದಾಖಲು ಮಾಡಲಾಗಿದೆ. ಇಂದು ಫಸ್ಟ್ ಡೇ ಕರ್ನಾಟಕದಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ.
Breaking: ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಡಿ.ವಿ ಸದಾನಂದಗೌಡ..!
ಹಾಸನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ವೈದ್ಯ ಶಂಕರೇಗೌಡ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು, ಇದನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 281, 106 ಅಡಿ ದಾಖಲು ಮಾಡಿಕೊಂಡಿದ್ದಾರೆ. ಸಾಗರ್ ಎಂಬ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈತ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.
ಮೃತ ಇಂದುಮತಿಯವರ ಅಳಿಯ ಶಂಕರೇಗೌಡ ಅವರು ಕಾರು ಚಾಲಕ ಸಾಗರ್ ವಿರುದ್ಧ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿ ಮೇರೆಗೆ ಹಾಸನ ಗ್ರಾಮೀಣ ಪೊಲೀಸರು, BNS 281,106 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಬಿಎನ್ಎಸ್ ಅಡಿ ಮೊದಲ ಪ್ರಕರಣ ಹಾಸನದಲ್ಲಿ ದಾಖಲಾದಂತಾಗಿದೆ.