ಬೆಂಗಳೂರು:- ಬಿಎಂಟಿಸಿಯ 50 ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಗೇಟ್ ಪಾಸ್ ಕೊಡಲಾಗಿದೆ.
Karnataka Weather: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 22ರವರೆಗೆ ಭಾರೀ ಮಳೆ…!
ಎಲೆಕ್ಟ್ರಿಕ್ ಬಸ್ಗಳಿಗೆ ಕನ್ನಡ ಬರದ ಮಲಯಾಳಿಗಳು, ಅನುಭವ ಇಲ್ಲದ ಸಣ್ಣಪುಟ್ಟ ಹುಡುಗರಿಗೆ ಬಸ್ ನೀಡಲಾಗಿತ್ತು. ಇದರಿಂದ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಿ 50 ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಗೇಟ್ ಪಾಸ್ ನೀಡಿದೆ.
ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳಲ್ಲಿ ಕೇರಳದ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಿಂದ ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿತ್ತು. ಕೆಲಸಕ್ಕೆ ಸೇರಿಕೊಳ್ಳುವಾಗ 22.500 ರೂಪಾಯಿ ಸಂಬಳ ಕೊಡುತ್ತೇವೆ ಅಂತ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದರೆ ಈಗ ಡ್ರೈವರ್ಗಳಿಗೆ ಕೇವಲ 18 ಸಾವಿರ ರೂಪಾಯಿ ಮಾತ್ರ ಸಂಬಳ ನೀಡುತ್ತಿದ್ದಾರೆ. ಇದರಿಂದ ಕನ್ನಡಿಗ ಡ್ರೈವರ್ಗಳು ಯಾರು ಕೆಲಸಕ್ಕೆ ಬರುತ್ತಿಲ್ಲ.ಹೀಗಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಏಜೆನ್ಸಿಗಳು ಕೇರಳದ ಹೆವಿ ಲೈಸೆನ್ಸ್ ಮತ್ತು ಅನುಭವ ಇಲ್ಲದ ಚಾಲಕರನ್ನು ಕರೆದುಕೊಂಡು ಕೆಲಸ ನೀಡುತ್ತಿದ್ದವು.
ತನಿಖೆ ನಡೆಸಿದ ಬಿಎಂಟಿಸಿಯ ಅಧಿಕಾರಿಗಳು 20ಕ್ಕೂ ಹೆಚ್ಚು ಕೇರಳದ ಚಾಲಕರು ಮತ್ತು 30ಕ್ಕೂ ಅನುಭವ, ಹೆಚ್ಚು ಹೆವಿ ಡ್ರೈವಿಂಗ್ ಲೈಸನ್ಸ್ ಇಲ್ಲದ ಚಾಲಕರನ್ನು ಪತ್ತೆ ಮಾಡಿ, ಅವರನ್ನು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡ್ರೈವರ್ ಹುದ್ದೆಯಿಂದ ತೆಗೆದು ಹಾಕಲಾಗಿದೆ.