ಬೆಂಗಳೂರು:- ನಗರದಲ್ಲಿ ಅನಿಯಮಿತ ಬಸ್ ನಿಲ್ದಾಣಗಳಿದ್ದರೂ ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಶೈಲಿಯ ಗುಣಮಟ್ಟದ ನಿಲ್ದಾಣವನ್ನು ಕಲ್ಪಿಸುವುದು ಸ್ಮಾರ್ಟ್ ನಿಲ್ದಾಣದ ಉದ್ದೇಶವಾಗಿದೆ. ಅದಕ್ಕಾಗಿಯೇ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅತಿ ಉಪಯುಕ್ತವಾಗುವ ರೀತಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ.ಪ್ರಮುಖವಾಗಿ
ಸಿಸಿಟಿವಿ ಕ್ಯಾಮರಾ
ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ 24/7 ಸಿಸಿ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಹಾಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಸಿಸಿ ಕ್ಯಾಮರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದ್ದು ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರಲಿದೆ.
ಪ್ಯಾನಿಕ್ ಬಟನ್
ಬಸ್ ನಿಲ್ದಾಣದಲ್ಲಿ ಪ್ರಮುಖವಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮುಖ್ಯವಾಗಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಅಪಾಯಕ್ಕೊಳಗಾದವರ ರಕ್ಷಣೆ ಮಾಡಲಿದ್ದಾರೆ.
ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್
ಸ್ಮಾರ್ಟ್ ಬಸ್ಸು ನಿಲ್ದಾಣದಲ್ಲಿ ಯಾವುದೇ ಸಂಧರ್ಭದಲ್ಲಿ ಮಹಿಳೆಯರಿಗೆ 24/7 ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ಯಾಡ್ ಗಳನ್ನು ಸ್ವೀಕರಿಸಿಕೊಳ್ಳಬಹುದು.
ಚಾರ್ಜಿಂಗ್ ಪಾಯಿಂಟ್ಸ್
ಬಸ್ಅಉ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಪಾಯಿಂಟ್ ಗಳು ಇರಲಿವೆ. ದಿನದ 24 ಗಂಟೆಗಳೂ ಇವೆ ಕಾರ್ಯರೂಪದಲ್ಲಿರುತ್ತವೆ.
IOT ಬೇಸ್ಡ್ ಗಾರ್ಬೇಜ್ ಬಿನ್
ಬಸ್ಸ ಬಿಲ್ದಾಣದಲ್ಲಿ ಸೆನ್ಸರ್ ಬೇಸ್ಡ್ ಡಸ್ಟ್ ಬಿನ್ ಅಳವಡಿಸಲಾಗಿದ್ದು, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ತ್ಯಾಜ್ಯ ಶೇಖರಿಸಲಿದ್ದು ತ್ಯಾಜ್ಯ ತುಂಬಿದ ತಕ್ಷಣದಲ್ಲಿ ಆನ್ ಲೈನ್ ಮೂಲಕ ಸೈರನ್ ನಿರ್ವಾಹಕರಿಗೆ ಮಾಹಿತಿ ತಲುಪಲಿದ್ದು ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಬಹುದಾಗಿದೆ.
ಬಸ್ ಗಳ ವಿವರ
ಬಸ್ ನಿಲ್ದಾಣದಲ್ಲಿ ನಾಲ್ಕು ಡಿಸ್ಪೇಗಳನ್ನು ಅಳವಡಿಸಿದ್ದು ಒಂದರಲ್ಲಿ ಬಿ.ಎಂ.ಟಿ.ಸಿ ಬಸ್ಸುಗಳ ವಿವರ ಲಭ್ಯವಾಗಲಿದೆ.
ರೈನ್ ಹಾರ್ವೆಸ್ಟಿಂಗ್ ಸಿಸ್ಟಮ್
ಮಳೆ ನೀರನ್ನು ಸಂಗ್ರಹಿಸಿ ನೀರು ಪೋಳಾಗದಂತೆ ನೀರನ್ನು ಗಿಡಗಳಿಗೆ ಹಾಗೂ ಇಂಗು ಗುಂಡಿಗಳಿಗೆ ಬಿಡಲಾಗುತ್ತದೆ.
ಸ್ನ್ಯಾಕ್ ವೆಂಡಿಂಗ್ ಮೆಷಿನ್
ಬಸ್ಅಉ ನಿಲ್ದಾಣದಲ್ಲಿ ಸ್ನ್ಯಾಕ್ ವೆಂಡಿಂಗ್ ಮೆಷಿನ್ ಅಳವಡಿಸಲು ಸ್ಥಳ ಮೀಸಲಿರಿಸಿದ್ದು ಸ್ನ್ಯಾಕ್ ವೆಂಡಿಂಗ್ ಮೆಷಿನ್ ಕೂಡಾ ಅಳವಡಿಸಬಹುದಾಗಿದೆ.
ಉಳಿದಂತೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಬಸ್ಸು ನಿಲ್ದಾಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಿದ್ದು ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಡಿಸ್ಪ್ಲೇಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಿಬಿಎಂಪಿ ಅಥವಾ ಸರಕಾರದ ಮಾಹಿತಿಗಳನ್ನು ಬಿಬಿಎಂಪಿ ಬಿತ್ತರಿಸಬಹುದಾಗಿದೆ