ಬೆಂಗಳೂರು:- ಡಿವೈಡರ್ ಮೇಲೆ ಬಿಎಂಟಿಸಿ ಬಸ್ ಹತ್ತಿದ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಗರದ ಬನಶಂಕರಿ ಬಸ್ ಸ್ಟ್ಯಾಂಡ್ ಬಳಿ ಜರುಗಿದೆ.
ಬಿಜೆಪಿ ಟಿಕೆಟ್ ವಂಚನೆ ಆರೋಪ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದ ಮೂವರ ವಿರುದ್ಧ FIR!
ಡಿಪೋ 20ರ ಬನಶಂಕರಿಗೆ ಸೇರಿದ ಬಸ್ ಇದಾಗಿದ್ದು, ಡಿಪೋದಿಂದ ಹೊರಗೆ ಬರ್ತಿದ್ದಂತೆ ಈ ಘಟನೆ ನಡೆದಿದೆ. ಡಿವೈಡರ್ ಮೇಲೆ ಸುಮಾರು ಅರ್ಧದಷ್ಟು ಬಸ್ ಹತ್ತಿದೆ. ಬಸ್ ಕೆಳಗೆ ಇಳಿಸಲು BMTC ಚಾಲಕ ಹರಸಾಹಸ ಪಡುತ್ತಿದ್ದಾರೆ.
KA- 57 F 0361 ನಂಬರ್ ನ ಬಸ್ ಇದಾಗಿದ್ದು, ಡಿಪೋದಿಂದ ಬಸ್ ಸ್ಟ್ಯಾಂಡ್ ಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಸ್ ನಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ.
ಇದರಿಂದ ಸ್ವಲ್ಪ ಹೊತ್ತು ಬನಶಂಕರಿ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.