ಬೆಂಗಳೂರು:- ಬ್ಲೂ ಫಿಲಂ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಕೊಡುವುದಾಗಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ನನ್ನ ಒಡೆತನದಲ್ಲಿನ ಚಿತ್ರಮಂದಿರದಲ್ಲಿ ‘ನೀಲಿ ಚಿತ್ರ’ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಚ್ಡಿ ಕುಮಾರಸ್ವಾಮಿ ಅವರ ಈ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇಕಿದ್ದರೆ ಕನಕಪುರಕ್ಕೆ ಭೇಟಿ ನೀಡಿ ಕುಮಾರಸ್ವಾಮಿಯವರೇ ಸ್ವತಃ ವಿಚಾರಿಸುವಂತೆಯೂ ಶಿವಕುಮಾರ್ ಅವರು ಸವಾಲೆಸೆದಿದ್ದಾರೆ.
ನನಗೆ ಕುಮಾರಸ್ವಾಮಿಯವರ ಬಗ್ಗೆ ಕರುಣೆ ಮತ್ತು ವಿಷಾಧವಿದೆ. ಅಂತಹ ಹಿರಿಯ ನಾಯಕರು, ಇಂತಹ ವ್ಯಕ್ತಿಯನ್ನು ತನ್ನ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೇಕೆ? ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಕನಕಪುರದ ಜನರನ್ನು ಕೇಳಲಿ. ನಾನು ಎಲ್ಲಿಂದ ಆಯ್ಕೆಯಾಗಿದ್ದೇನೆ.
ನಾನು 1.23 ಲಕ್ಷ ಮತದಾರರಿಂದ ಆಯ್ಕೆಯಾಗಿದ್ದೇನೆ. ಯಾರಾದರೂ ಹೇಳಿದರೆ ನಾನು ರಾಜಕೀಯ ತ್ಯಜಿಸುತ್ತೇನೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ. ಅವರ ಅಂತಸ್ತಿನ ಯಾರಾದರೂ ಹಾಗೆ ಮಾತನಾಡಬಾರದು ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.