ಬಾಗಲಕೋಟೆ: “ಜೆಡಿಎಸ್ ನಾಯಕರು ಪ್ರಧಾನ ಮಂತ್ರಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಭೇಟಿ ಮಾಡಿ ಬಂದಿದ್ದಾರೆ. ವಿಜಯೇಂದ್ರ ಎಲ್ಲ ಹಿರಿಯರನ್ನ ವಿಶ್ವಾಸ ತಗೆದುಕೊಂಡು ಯಾವ ಗೊಂದಲವಿಲ್ಲದೇ ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಆಶಿರ್ವಾದ ಸಿಕ್ಕಿದೆ” ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
CET Exam 2024-25: ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ ಜನವರಿ 10 ರಿಂದ ಅರ್ಜಿ ಸಲ್ಲಿಕೆ ಆರಂಭ
ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡುತ್ತಾ, “ಕುಮಾರಸ್ವಾಮಿ ಅವರು, ಮೋದಿಯವರನ್ನು ಪ್ರಧಾನಿ ಮಾಡಲು, ರಾಜ್ಯದ ತುಂಬ ಓಡಾಡಿ ಕೆಲಸ ಮಾಡ್ತೇವೆ ಅಂತಾ ಹೇಳಿದ್ದಾರೆ. ಇದರ ಜೊತೆಗೆ ನನ್ನ ಮಗ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ದಿಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆ ಸಂತೋಷ ತಂದಿದ್ದು, ರಾಷ್ಟ್ರೀಯ ನಾಯಕರ ಭೇಟಿ ನಮಗೆ ಖುಷಿಯಾಗಿದೆ” ಎಂದರು.