ಲಕ್ನೋ: ದುಡ್ಡಿಗಾಗಿ ಪ್ರಿಯತಮೆ ಮಾಡುತ್ತಿದ್ದ ಬ್ಲಾಕ್ಮೇಲ್ಗೆ ಬೇಸತ್ತು ಉದ್ಯಮಿಯೊಬ್ಬರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ಇಲ್ಲಿನ ಉದ್ಯಮಿಯೊಬ್ಬರು ಗೆಳತಿಯ ಬ್ಲಾಕ್ಮೇಲ್ ಕಾಟಕ್ಕೆ ಬೇಸತ್ತು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 15 ರಂದು ಈ ಘಟನೆ ನಡೆದಿದ್ದು, ಉದ್ಯಮಿ ಮನೋಜ್ ಕುಮಾರ್ (34) ಸೈರ್ಪುರ ಪ್ರದೇಶದ ಹೋಟೆಲ್ ಒಂದರಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಡೆದ ಹಿಮ್ಮಡಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ, ಇಲ್ಲಿದೆ ಮನೆ ಮದ್ದು!
ಮೃತದೇಹದ ಬಳಿ ಪೊಲೀಸರಿಗೆ ಪಿಸ್ತೂಲ್, ಕಾರ್ಟ್ರಿಡ್ಜ್ ಶೆಲ್ಗಳು ಮತ್ತು ಡೆತ್ ನೋಟ್ ಸಿಕ್ಕಿದ್ದು, ಆ ಲೆಟರ್ನಲ್ಲಿ ಉದ್ಯಮಿ ತಾನು ಪ್ರೀತಿಸಿದಾಕೆಯಿಂದ ಮೋಸ ಹೋಗಿರುವುದಾಗಿ ಬರೆದುಕೊಂಡಿದ್ದಾರೆ. ʼಆಕೆ ನನ್ನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲದೆ ಹಣಕ್ಕಾಗಿ ಪದೇ ಪದೇ ನನಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು. ನಾನು ನನ್ನ ಫ್ಲಾಟ್ ಅನ್ನು 7 ಲಕ್ಷ ರೂಪಾಯಿಗಳಿಗೆ ಮಾರಿ ಆ ಹಣವನ್ನು ಕೂಡಾ ಆಕೆಗೆ ನೀಡಿದ್ದೇನೆ. ಹೀಗಿದ್ದರೂ ಆಕೆಯ ಹಣದ ದಾಹ ಕಡಿಮೆಯಾಗಿರಲಿಲ್ಲ. ನನ್ನ ಈ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲʼ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ.