ಶಿವಮೊಗ್ಗ:- ನಮ್ಮ ಗ್ಯಾರಂಟಿ ಜಾರಿಯಿಂದ ಬಿಜೆಪಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಐದನೇ ಗ್ಯಾರಂಟಿ ಯುವನಿಧಿ ಇವತ್ತು ಚಾಲನೆ ನೀಡಲಾಗಿದೆ. ನಿರುದ್ಯೋಗ ಯುವಕರಿಗೆ ಹಾಗೂ ಪದವೀಧರ ಯುವಕರಿಗೆ 3 ಸಾವಿರ ಹಣ ಕೊಡ್ತೀವಿ. ಎರಡು ವರ್ಷದವರೆಗೂ ಹಣ ಕೊಡ್ತೀವಿ. ಯುವಕರಿಗೆ ಉದ್ಯೋಗ ತರಬೇತಿ ಕೂಡ ನೀಡ್ತೀವಿ. ಗ್ಯಾರಂಟಿ ಕೊಡುತ್ತಿರುವುದು ಅವರಿಗೆ ಹೊಟ್ಟೆ ಉರಿ ಆಗ್ತೀದೆ. ಹಾಗಾಗಿ ಬಿಜೆಪಿ ಯವರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದರು.
ಇನ್ನೂ ಶಕ್ತಿ ಯೋಜನೆಯಲ್ಲಿ 130 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಪ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. 1 ಕೋಟಿ 58 ಲಕ್ಷ ಜನರಿಗೆ ಪ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. ನಾವು ಗ್ಯಾರಂಟಿ ಯೋಜನೆ ಗಳು ಚುನಾವಣೆಗಾಗಿ ಮಾಡಿಲ್ಲ. ಇದು ಜನರಿಗಾಗಿ ಮಾಡಿರುವುದು. ಒಂದು ಕುಟುಂಬಕ್ಕೆ ನಾಲ್ಕರಿಂದ ಐದು ಸಾವಿರ ಹಣ ಸಿಗ್ತಾ ಇದೆ. ಕುಮಾರಸ್ವಾಮಿ ಅಂದ್ರೆ ಸುಳ್ಳು . ಸುಳ್ಳು ಅಂದ್ರೆ ಕುಮಾರಸ್ವಾಮಿ. ಶ್ರೀರಾಮಚಂದ್ರ ಭಕ್ತರು ನಾವು. ಇದು ರಾಜಕೀಯ ಮಾಡೋಕೆ ಹೊರಟಿದ್ದಾರೆ ಎಂದರು.
ಇನ್ನೂ ಮೂರು ಡಿಸಿಎಂ ಚರ್ಚೆ ವಿಚಾರವಾಗಿ ಮಾತನಾಡಿ, ನೋ ಡಿಸಿಎಂ, ನೋ ಕಮೆಂಟ್ಸ್ ಎಂದು ಹೊರಟಿದ್ದಾರೆ.