ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರಗಿಯಲ್ಲಿ ಇವತ್ತು ಕೇಸರಿ ಪಡೆಯ ಘರ್ಜನೆ ಜೋರಾಗಿತ್ತು.. ಬಿಜೆಪಿಯ ಘಟಾನುಘಟಿ ಲೀಡರ್ಸ್ಗಳೆಲ್ಲ ಆಗಮಿಸಿ ಬೃಹತ್ ಪ್ರೊಟೆಸ್ಟ್ ಮಾಡಿದ್ರು..ಎಲ್ಲರ ದನಿ ಒಂದೇ ಆಗಿತ್ತು..ಅದುವೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಅನ್ನೋದು. .ಅಷ್ಟಕ್ಕೂ ಕಾರಣ ಏನ್ ಗೊತ್ತಾ..ಇಲ್ಲಿದೆ ಫುಲ್ ಡಿಟೇಲ್…
ಪ್ರಿಯಾಂಕ್ ಖರ್ಗೆ..ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಫುಲ್ ಮಿನಿಸ್ಟರ್..ಅಷ್ಟೇ ಅಲ್ಲ ಕೈ ಪಕ್ಷಕ್ಕೆ ಹೈಕಮಾಂಡ್ ಆಗಿರುವ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರ..ಹೀಗೆ ಶಕ್ತಿಶಾಲಿಯಾಗಿರೋ ಸಚಿವ ಖರ್ಗೆ ವಿರುದ್ಧ ಇವತ್ತು ಖರ್ಗೆ ತವರಲ್ಲಿ ವಿಪಕ್ಷ ಬಿಜೆಪಿ ಸಕತ್ ಧೂಳ್ ಎಬ್ಬಿಸಿತ್ತು.. ಇಡೀ ಕಲಬುರಗಿ ನಗರದ ಎಲ್ಲೆಡೆ ಬೀದಿಗಿಳಿದ ಕೇಸರಿ ಪಡೆ ಪ್ರಿಯಾಂಕ್ ರಾಜೀನಾಮೆ ನೀಡ್ಲೇಬೇಕು ಅಂತ ಬೃಹತ್ ಪ್ರತಿಭಟನೆ ಮಾಡಿತು..
PM Surya Ghar Yojana: ನಿಮ್ಮ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಬೇಕಾ..? ಹಾಕಿದ್ರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ವಿಪಕ್ಷ ನಾಯಕರಾದ ಆರ್ ಅಶೋಕ್ ಛಲವಾದಿ ನಾರಾಯಣಸ್ವಾಮಿ ಸಿ ಟಿ ರವಿ ಸೇರಿದಂತೆ ಇಡೀ ಬಿಜೆಪಿ ಟೀಂ ಖರ್ಗೆ ವಿರುದ್ಧ ರಣಕಹಳೆ ಮೊಳಗಿಸಿತು.. ಜಗತ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್ ರಾಜ್ಯ ಸರ್ಕಾರ SS ಸರ್ಕಾರ ಅಂದ್ರೆ ಸುಪಾರಿ & ಸುಸೈಡ್ ಸರ್ಕಾರ ಅಂತ ವಾಗ್ದಾಳಿ ಮಾಡಿದ್ರು..ಸ್ವಲ್ಪ ವೇಟ್ ಮಾಡಿ ಮೂಡಾ ಕೇಸಲ್ಲಿ ಸಿದ್ರಾಮಯ್ಯ ಮನೆಗೆ ಹೋಗ್ತಾರೆ ಅಂದ್ರು.
ಇದೇವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮೃತ ಸಚಿನ್ ಪಾಂಚಾಳ್ ಕೇಸ್ ಪ್ರಸ್ತಾಪಿಸಿ ಪ್ರಿಯಾಂಕ್ ಯಾಕೆ ರಾಜೀನಾಮೆ ಕೊಟ್ಟಿಲ್ಲ ಅಂದ್ರು ಅಷ್ಟೇಅಲ್ಲ ಸಚಿನ್ ಮನೆಗೆ ಭೇಟಿ ಕೊಟ್ಟಿದ್ದಾರಾ ಪ್ರಿಯಾಂಕ್ ಅಂತ ಪ್ರಶ್ನೆ ಮಾಡಿದ್ರು ಇದೇ ಕಲಬುರಗಿಯಲ್ಲಿ ಬೇರೆ ಯಾವೊಬ್ಬ ದಲಿತರನ್ನ ಇವ್ರು ಬೆಳೆಸಿದ್ದಾರೆ ಹೇಳಿ ಅಂದ್ರು.
ಬಿಜೆಪಿ ನಾಯಕರಿಗೆ ಎಳನೀರು ಪಾನಕ ವ್ಯವಸ್ಥೆ ಮಾಡಿದ್ದ ವಿಚಾರಕ್ಕೆ ಮಾತನಾಡಿದ ಛಲವಾದಿ ನಿಮ್ಮ ನಿವಾಸಕ್ಕೆ ನಾವು ಬಂದಿದ್ದು ಹೆಣ್ಣು ಕೇಳಿ ಸಂಭಂಧ ಬೆಳಿಸೋಕೆ ಅಲ್ಲ ನಮ್ಮನ್ನ ಕೆಣಕಿದ್ರೆ ನಾವು ಸುಮ್ಮನಿರಲ್ಲ ಅಂದ್ರು.. ಇದೇ ವೇಳೆ ಮಾತನಾಡಿದ ಸಿ ಟಿ ರವಿ ಈ ಪ್ರಿಯಾಂಕ್ ಖರ್ಗೆ ಆಗ ಈಶ್ವರಪ್ಪ ಕೇಸಲ್ಲಿ ರಾಜೀನಾಮೆ ಕೇಳಿದ್ರಲ್ಲ ಈಗ್ಯಾಕೆ ತಾವು ಕೊಡ್ತಿಲ್ಲ ಸಂವಿಧಾನ ಎಲ್ಲರಿಗೂ ಒಂದೇ ಅಲ್ವಾ ಅಂತ ಹೇಳಿದ್ರು..ಒಟ್ಟಾರೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ವಿಚಾರ ಇದೀಗ ಮನೆವರೆಗೂ ಬಂದು ನಿಂತಿದೆ…