ದೆಹಲಿ : 2024ರ ಲೋಕಸಭಾ ಚುನಾವಣೆಗೆ ಎಲ್ಲೆಡೆ ಸಿದ್ಧತೆ ನಡೆದಿದ್ದು ಎಲ್ಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡುತ್ತಿವೆ. ಇದರ ಮಧ್ಯೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಿಕೆಟ್ ಘೋಷಿಸಲಾಗಿದ್ದು, ಮೂರನೇ ಬಾರಿಯೂ ಉತ್ತರ ಪ್ರದೇಶದ ವಾರಣಾಸಿಯಿಂದಲೇ ಕಣಕ್ಕಿಳಿಯಲಿದ್ದಾರೆ.
Rameshwaram Cafe Bomb Blast: ಸ್ಫೋಟಕ್ಕೂ ಮೊದಲು ಆರೋಪಿ ಬಂದಿರುವ ದಾರಿ ಪರಿಶೀಲನೆ!
ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಾರಿಯೂ ಗುಜಾರಾತಿನ ಗಾಂಧಿನಗರದಿಂದಲೇ ಕಣಕ್ಕಿಳಿಯಲಿದ್ದಾರೆ. ಅರುಣಾಚಲ ಪ್ರದೇಶದಿಂದ ಕಿರಣ್ ರಿಜಿಜು, ಚಾಂದಿನಿ ಚೌಕ್ನಿಂದ ಪ್ರವೀಣ್, ರಾಜ್ಕೋಟ್ನಿಂದ ಪುರುಷೋತ್ತಮ ಸೇರಿದಂತೆ ಮಾಜಿ ಸಚಿವೆ ಸುಷ್ಮಾ ಪುತ್ರಿಗೂ ಟಿಕೆಟ್ ಘೋಷಿಸಲಾಗಿದೆ.
ಕರ್ನಾಟಕದ ಉದ್ಯಮಿ ಹಾಗೂ ಹಾಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ಚಂದ್ರಶೇಖರ್ ಅವರನ್ನು ಬಿಜೆಪಿಯ ನೆಲೆಯೇ ಇಲ್ಲದ ದೇವರ ನಾಡಿನಲ್ಲಿ ಪರಿಚಯಿಸಲಾಗುತ್ತಿದೆ. ಇದರು ಚಂದ್ರಶೇಖರ್ ಅವರಿಗೆ ಸಿಹಿಯೋ? ಕಹಿಯೋ ಎಂದು ಕಾದುನೋಡಬೇಕಿದೆ.