ಗದಗ: ಬಿಜೆಪಿ ಕಾರ್ಯಕರ್ತರು ಬೊಮ್ಮಾಯಿ ಎದುರೇ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಡೆದಿದೆ. ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿಗೆ ತೀವ್ರ ಮುಜುಗರ ಉಂಟಾಗಿದೆ. ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಬದಲಾಯಿಸಲು ಒತ್ತಾಯ ಮಾಡಿ ಹೇಮಗಿರೀಶ ಹಾವಿನಾಳ ದುರಾಡಳಿತ ನಡೆಸ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಸಿದ್ದಾರೆ.
ಕಾರ್ಯಕರ್ತರ ಗಲಾಟೆ ಹೆಚ್ಚಾಗ್ತಿದ್ದಂತೆ ಮದ್ಯ ಪ್ರವೇಶಿಸಿ ಮುಂಡರಗಿಗೆ ಬಂದು ಸಮಸ್ಯೆ ಬಗೆಹರಿಸ್ತೀನಿ ಎಂದು ಸಿ ಸಿ ಪಾಟೀಲ್ ಭರವಸೆ ನೀಡಿದರು. ಅಷ್ಟಾದ್ರೂ ಕೇಳದ ಬಿಜೆಪಿ ಕಾರ್ಯಕರ್ತರು ಸಭೆಯಿಂದ ಹೊರನಡೆದರು. ಬಸವರಾಜ ಬೊಮ್ಮಾಯಿ ಏನೂ ತೋಚದಂತೆ ಇದೆಲ್ಲಾ ಕಣ್ಮುಂದೆ ನಡೀತಿರೋದನ್ನ ನೋಡಿ ಸುಮ್ಮನೆ ಕುಳಿತಿದ್ದರು. ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.