ಗದಗ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸುವ ಮೂಲಕ ದಲಿತರಿಗೆ ದ್ರೋಹ, ಮೋಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವ ಇದೆ. ಹಿರಿಯ ರಾಜಕಾರಣಿ ಅವರ ಬಗ್ಗೆ ಟೀಕೆ ಮಾಡಲ್ಲ.
ಆದರೆ ಸೋಲಿಸಲು ಯಾಕೆ ನಿಲ್ಲಿಸ್ತಾರೆ. ದೇಶದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕಾಂಗ್ರೆಸ್ ನಿರಂತರವಾಗಿ ದುರುಪಯೋಗ ಮಾಡ್ತಾನೇ ಬಂದಿದ್ದಾರೆ. ದಲಿತರನ್ನು ನಂಬಿಸಿ ಮೋಸ ಮಾಡಿ ಕಾಂಗ್ರೆಸ್ (Congress) ಇಷ್ಟು ವರ್ಷ ಈ ದೇಶದಲ್ಲಿ ಆಡಳಿತ ನಡೆಸಿತು. ಈಗ ಮತ್ತೊಬ್ಬ ದಲಿತರಿಗೆ ಮೊಸ ಮಾಡ್ತಿದ್ದಾರೆ ಎಂದರು.
Apple ವಾಚ್ ಸೀರಿಸ್ 9, ವಾಚ್ ಅಲ್ಟ್ರಾ 2 ಮಾರಾಟ US ನಲ್ಲಿ ಸ್ಥಗಿತ: ಕಾರಣವೇನು?
ಪ್ರಿಯಾಂಕಾ ಖರ್ಗೆ (Priyank Kharge) ಧರ್ಮ ದ್ರೋಹಿ, ಅವನ ಮಾತಿನ ಬಗ್ಗೆ ಬಹಳ ಬೇಸರ ಬರುತ್ತೆ. ಆದರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಇನ್ನು ಮುಂದೆ ದಲಿತ ಅಸ್ತ್ರ ತೋರಿಸಿ, ದಲಿತ ಪ್ರಧಾನಿ ಮಾಡ್ತೀವಿ ಅಂತ ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ. ಅದು ಇನ್ನುಮುಂದೆ ಸಾಧ್ಯವಿಲ್ಲ. ಬರುವಂತಹ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಎಂದರು.