ಧಾರವಾಡ: ಅಳಿದು ತೂಗಿ ಕೊನೆಗೂ ರಾಜ್ಯ ಬಿಜೆಪಿ ಘಟಕಕ್ಕೆ ಬಿಜೆಪಿ ಹೈಕಮಾಂಡ ನಾಯಕರು ನೂತನ ರಾಜ್ಯಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಜನಪ್ರತಿನಿಧಿಗಳು ಈ ವಿಷಯದ ಕುರಿತು ತಮ್ಮದೆಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದವರು ಮಾಧ್ಯಮದ ಮುಂದೆ ತಮ್ಮ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಸ್ವಪಕ್ಷೀಯ ಹೈಲಮಾಡ ನಡೆಗೆ ಶಾಸಕ ಬೆಲ್ಲದ ಅವರು ಅಸಮಧಾನಗೊಂಡ್ರಾ ಎಂಬ ಪ್ರಶ್ನೆ ಹುಟ್ಡು ಹಾಕಿದೆ. ನಗರದ ಖಾಸಗಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ಕೇಳಲು ಮಾಧ್ಯಮವರು ತೆರಳಿದರು.
ಆದರೆ ಇದಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ಮೌನವಾಗಿಯೇ ಸಾಗಿದ್ದಾರೆ. ಈ ಹಿಂದೆಯು ಶಾಸಕ ಅರವಿಂದ ಬೆಲ್ಲದವರು ಸಿಎಂ ರೇಸ್ನಲ್ಲಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿತ್ತು. ಆದರೆ ಇದಕ್ಕೆ ಬಿಎಸ್ವೈ ಅವರೇ ಅಡಗಾಲು ಹಾಕಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಬಿಎಸ್ವೈ ಪುತ್ರ ಬಿ ವೈ ವಿಜೆಯೇಂದ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಶಾಸಕ ಅರವಿಂದ ಬೆಲ್ಲದ ಅಸಮಧಾನಕ್ಕೆ ಕಾರಣವಾಯಿತ್ತಾ ಎಂಬ ಪ್ರಶ್ನೆಹುಟ್ಟು ಹಾಕಿದೆ.