ಬೆಂಗಳೂರು: ಬಿಜೆಪಿಯವರು ವಕ್ಫ್ ವಿವಾದವನ್ನು ಕೋಮುವಾದದ ದೃಷ್ಟಿಯಿಂದ ನೋಡ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿಯವರು ದುರುದ್ದೇಶದಿಂದ ಚುನಾವಣೆವಾಗಿ ವಕ್ಫ್ ವಿವಾದ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಆ ವಿಷಯ ಕೈ ಬಿಡುತ್ತಾರೆ.
ವಕ್ಫ್ ವಿಚಾರದಲ್ಲಿ ಅನೇಕ ಚರ್ಚೆಗಳು ಆಗಿವೆ. ಈ ಹಿಂದೆ ಅನೇಕ ದಾನಗಳು ಆಗಿವೆ. ಅದರಲ್ಲಿ ಏನಾದರೂ ದೋಷ ಇದ್ದರೆ ಸರಿಪಡಿಸಿಕೊಳ್ಳುವುದಕ್ಕೆ ನಮ್ಮ ಸರ್ಕಾರ ಇದೆ. ಬಿಜೆಪಿಯವರು ಸುಮ್ಮನೆ ಅದನ್ನು ಕೋಮುವಾದದ ದೃಷ್ಟಿಯಿಂದ ನೋಡ್ತಿದ್ದಾರೆ. ಬಿಜೆಪಿಯವರಿಗೆ ದ್ವೇಷವನ್ನು ಹೆಚ್ಚು ಮಾಡಬೇಕು, ಮುಸ್ಲಿಮರನ್ನು ಟಾರ್ಗೆಟ್ ಮಾಡಬೇಕು. ಅದು ಬಿಟ್ಟು ಇನ್ನೇನೂ ಇಲ್ಲ ಎಂದು ಕಿಡಿಕಾರಿದ್ದಾರೆ.
Storage Tips: ಟೊಮೆಟೊ ಹಾಳಾಗದೆ ಹೆಚ್ಚು ದಿನ ಫ್ರೆಶ್ ಆಗಿ ಇರಲು ಸೂಪರ್ ಟಿಪ್ಸ್ ಇಲ್ಲಿದೆ ನೋಡಿ.!
ಇವರದ್ದೇ ಸರ್ಕಾರದ ಅವಧಿಯಲ್ಲಿ ಅನೇಕ ನೋಟಿಸ್ಗಳನ್ನು ಕೊಡಲಾಗಿದೆ. ಅದನ್ನೆಲ್ಲಾ ಕಾನೂನು ಪ್ರಕಾರ ತೀರ್ಮಾನ ಮಾಡಬೇಕೇ ಹೊರತು ಕೋಮುವಾದದ ಲೇಪವನ್ನು ಹಾಕೋದು ಸರಿಯಲ್ಲ. ಗೊಂದಲ ಸೃಷ್ಟಿ ಮಾಡಿ ರಾಜಕೀಯ ಲಾಭಕ್ಕಾಗಿ ಮಾಡೋದು ಸರಿಯಲ್ಲ. ಚುನಾವಣೆ ಮುಗಿದ ಮೇಲೆ ಯಾರೂ ಕಾಣಲ್ಲ. ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಇದು ಸರಿಯಲ್ಲ. ಅನೇಕ ವಿಚಾರಗಳನ್ನು ಎತ್ತಿ ಕಟ್ಟುತ್ತಿದ್ದಾರೆ.
ನಮ್ಮ ಸರ್ಕಾರ ಯಾರ ಭೂಮಿಯನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಯಾರನ್ನೂ ಒಕ್ಕಲೆಬ್ಬಿಸಲ್ಲ, ಯಾರ ಭೂಮಿಯನ್ನು ಕಬಳಿಸಲ್ಲ. ಬಿಜೆಪಿಯವರಿಗೆ ನಿಜಾಂಶದ ಬಗ್ಗೆ ಚರ್ಚೆಯಾಗಬೇಕಿಲ್ಲ. ಸುಮ್ಮನೇ ಸುದ್ದಿಯಾಗಬೇಕಷ್ಟೆ. ಅದಕ್ಕೇ ಈ ರೀತಿ ಮುಸ್ಲಿಮರು ಆಸ್ತಿ ಕಬಳಿಸ್ತಿದ್ದಾರೆ. ಅವರು ಒಳ್ಳೆಯವರಲ್ಲ ದೇಶದ್ರೋಹಿಗಳು, ದೇಶ ಪ್ರೇಮ ಇಲ್ಲ. ದೇಶದಲ್ಲಿ ಏನು ತಪ್ಪಾದರೂ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.