ನವದೆಹಲಿ:-ಶುಕ್ರವಾರ ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ ಅವರನ್ನು ಬಿಜೆಪಿ ರೆಬಲ್ಸ್ ಟೀಂ ಭೇಟಿ ಮಾಡಿ ವಕ್ಫ್ ಕುರಿತಾದ ಅಧ್ಯಯನ ವರದಿಯನ್ನು ನೀಡಿದೆ.
ಮನೆ ಬಿಟ್ಟು ಟ್ರಿಪ್ ಹೋಗೋ ಪ್ಲ್ಯಾನ್ ಇದ್ಯಾ!? ಬೆಂಗಳೂರಿನ ನಿವಾಸಿಗಳಿಗೆ ಪೊಲೀಸರಿಂದ ಸಿಕ್ತು ಗುಡ್ನ್ಯೂಸ್!
ಕರ್ನಾಟಕದ ಬೀದರ್ನಿಂದ ಬಳ್ಳಾರಿಯ ವರೆಗೆ ನಾವು ‘ವಕ್ಫ್ ಹಠಾವೋ ದೇಶ ಬಚಾವೋ ಅಭಿಯಾನದ ಅಡಿಯಲ್ಲಿ ಪ್ರವಾಸ ನಡೆಸಿದ್ದು, ಈ ವೇಳೆ ಅನೇಕ ಜನರು ವಕ್ಫ್ ಬೋರ್ಡ್ನಿಂದ ತೊಂದರೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ವಕ್ಫ್ ಸಮಸ್ಯೆಗೊಳಗಾದವರಿಗಾಗಿ ತೆರೆದ ವಾರ್ ರೂಂನಲ್ಲಿ ದಾಖಲೆ, ಸಾಕ್ಷಿ, ಆಧಾರಗಳ ಸಹಿತ ಅನೇಕ ದೂರುಗಳು ದಾಖಲಾಗಿವೆ. ವಕ್ಫ್ ಕಾನೂನಿನಲ್ಲಿರುವ ಲೋಪದೋಷಗಳು ಹೇಗೆ ದೇಶದಾದ್ಯಂತ ವಕ್ಫ್ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿವೆ ಎಂಬುದನ್ನು ವಿವರಿಸಲಾಯಿತು.
ಜೊತೆಗೆ ವಕ್ಫ್ ಹೆಸರಿನಲ್ಲಿ ಹೇಗೆ ರೈತರು, ಜನಸಾಮಾನ್ಯರು ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳ ಅತಿಕ್ರಮಣ ನಡೆಯುತ್ತಿದೆ ಎಂಬುದನ್ನು ಚರ್ಚಿಸಲಾಯಿತು. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಕ್ಫ್ ತಿದ್ದುಪಡಿಗೆ ನಮ್ಮ ಬೆಂಬಲ ಮತ್ತು ಸಲಹೆಗಳನ್ನು ನೀಡಲಾಯಿತು. ಹಾಗೆ ದೇಶಾದ್ಯಂತ ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವ ಸ್ಥಳಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡು ಸಾರ್ವಜನಿಕ ಆಸ್ತಿ ಎಂದು ಘೋಷಿಸಬೇಕು ಎಂದು ವಿನಂತಿಸಲಾಯಿತು. ಜೊತೆಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.