ಬೆಂಗಳೂರು:- ಬಿಜೆಪಿಯಿಂದ “ಕೈ” ಶಾಸಕರಿಗೆ 50 ಕೋಟಿ ಆಫರ್ ಕೊಡಲಾಗಿದೆ ಎಂಬ ಸಿಎಂ ಹೇಳಿಕೆಯನ್ನು ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
IPL 2025: ಮುಂಬೈನ ಈ ಮೂವರು ಸ್ಟಾರ್ ಆಟಗಾರರ ಮೇಲೆ ಆರ್ಸಿಬಿ ಕಣ್ಣು!
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಸತತವಾಗಿ ನಡೆಸುತ್ತಿವೆ. ಮುಡಾ ಪ್ರಕರಣದ ಆರೋಪ ಸೇರಿದಂತೆ ಎಲ್ಲಾ ಯತ್ನಗಳೂ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿಯೇ ನಡೆಯುತ್ತಿವೆ ಎಂದರು.
ಈಗ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ 42 ಮಂದಿ ಶಾಸಕರನ್ನು ಹಣ ಕೊಟ್ಟು ಕರೆತಂದು ಸರ್ಕಾರ ರಚಿಸಿದ್ದರು. ಇಲ್ಲಿಯೂ ಅಂತಹುದೇ ಪ್ರಯತ್ನ ಮೊದಲು ನಡೆಸಿ ಯಶಸ್ವಿಯಾಗಿದ್ದರು. ಈಗಲೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮಗಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೆ.
ಇದನ್ನೆಲ್ಲಾ ಜನ ಗಮನಿಸುತ್ತಾರೆ. ಕೆಲವೊಮೆ ತಪ್ಪು ಕಲ್ಪನೆಗಳು ಬಂದರೂ ನಾವು ಜನಸಮುದಾಯದ ನಡುವೆ ಹೋಗಿ ವಿವರಣೆ ನೀಡುತ್ತೇವೆ. ಜನ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಸ್ವೀಕರಿಸುವುದಿಲ್ಲ , ಅವರನ್ನು ತಿರಸ್ಕಾರ ಮಾಡುತ್ತಾರೆ ಎಂದರು.
ನಮಗೆ ಯಾವುದೇ ಆತಂಕ ಇಲ್ಲ. ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ. ಅವರ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ. ಬೃಹತ್ ಪ್ರಮಾಣದ ಜನಾದೇಶ ಇದ್ದಾಗಿಯೂ ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳು ಆಕ್ಷೇಪಾರ್ಹ ಎಂದು ಹೇಳಿದರು. ಒಳಮೀಸಲಾತಿ ಯಾವಾಗ ಎಂಬ ಪ್ರಶ್ನೆ ಸದಾಕಾಲ ಎದುರಾಗುತ್ತಲೇ ಇದೆ. ಅದಕ್ಕೆ ತಾರ್ಕಿಕ ಅಂತ್ಯ ಎಂಬ ನಿಟ್ಟಿನಲ್ಲಿ ರಾಜ್ಯಸರ್ಕಾರ ಈಗ ನಾಗಮೋಹನದಾಸ್ ಅವರ ಸಮಿತಿಯನ್ನು ರಚನೆ ಮಾಡಿದ್ದು, ಪರಿಶಿಷ್ಟ ಜಾತಿಗಳ ವೈಜ್ಞಾನಿಕ ಹಾಗೂ ಸಮರ್ಥನೀಯ ದತ್ತಾಂಶ ಸಂಗ್ರಹಕ್ಕೆ ಮುಂದಾಗಿದೆ ಎಂದರು.