ಬೆಂಗಳೂರು: ಬಿಜೆಪಿ ಒಡೆದ ಮಡಿಕೆ ಚೂರಾಗಿದೆ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ಒಡೆದ ಮನೆಯಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಲವಾರು ಕಾಂಗ್ರೆಸ್ಗಳಿವೆ. ಆದರೆ, ಬಿಜೆಪಿ ಇರುವುದು ಇಡೀ ದೇಶದಲ್ಲಿ ಒಂದೇ ಎಂದು ಕಾಂಗ್ರೆಸ್ಸಿಗರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚಾಟಿ ಬೀಸಿದ್ದಾರೆ.
ರಾಜ್ಯಾಧ್ಯಕ್ಷ ಪಟ್ಟ: ನಿರ್ಮಲನಂದನಾಥ ಶ್ರೀ ಆಶೀರ್ವಾದ ಪಡೆದ BY ವಿಜಯೇಂದ್ರ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ ಭಾರತದ ಲೋಕಸಭಾ ಚುನಾವಣೆ ಎದುರು ನೋಡ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ ಎಂದು ಹೇಳಲಾಗಿದೆ. ಕಳೆದ ಬಾರಿ 28 ಸ್ಥಾನಗಳನ್ನು ಗೆದಿದ್ದೆವು. ಕಾಂಗ್ರೆಸ್ನವರ ರಿಯಾಕ್ಷನ್ ನೋಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ಗೆ ಈ ಆರೋಪ ಮಾಡಲು ನೈತಿಕತೆ ಇಲ್ಲ. ಕಾಂಗ್ರೆಸ್ ಇರುವುದೇ ಕುಟುಂಬ ರಾಜಕಾರಣದಲ್ಲಿ. ಬಿಜೆಪಿ ಎಂದಿಗೂ ಕುಟುಂಬ ರಾಜಕಾರಣ ಬೆಂಬಲಿಸಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ಬೂತ್ಗಳಲ್ಲಿ ಪಕ್ಷ ಸಂಘಟನೆ
ಎಲ್ಲಾ ಬೂತ್ಗಳಲ್ಲಿ ಪಕ್ಷ ಸಂಘಟನೆ ಬಲ ಪಡಿಸುತ್ತೇವೆ. ಬೂತ್ ಗೆದ್ದರೆ, ದೇಶ ಗೆಲ್ತೇವೆ ಅನ್ನೋದು ವರಿಷ್ಠರ ವಿಶ್ವಾಸ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಘಟಾನುಘಟಿ ನಾಯಕರೂ ಬೂತ್ ಅಧ್ಯಕ್ಷರಾಗಿ ಬಂದವರು. ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಅಧ್ಯಕ್ಷರಿಗೂ ಸಿಕ್ತಿದೆ. ನಮ್ಮ ಪಕ್ಷದಲ್ಲಿ ಬೂತ್ ಅಧ್ಯಕ್ಷರಿಗೂ ಗೌರವ ಸಿಕ್ತಿದೆ ಎಂದು ತಿಳಿಸಿದ್ದಾರೆ.