ಬೆಂಗಳೂರು: ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಹಾಗೂ ಇದರಲ್ಲಿ ದೊಡ್ಡವರ ಪಾತ್ರವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಕೆಶಿ ಹೂಡಿಕೆ ಮಾಡಿರುವ ಸಂಸ್ಥೆಗೆ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಸಿಬಿಐ ಯಾವ ಆಧಾರದಲ್ಲಿ ನನಗೆ ನೋಟಿಸ್ ನೀಡಿದೆ ಎಂಬುವುದು ಗೊತ್ತಿಲ್ಲ ಎಂದರು.
ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದರು. ನಾನು ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಹೀಗಿದ್ದರೂ ಕಿರುಕುಳ ನೀಡಲು ನೋಟಿಸ್ ಕೊಟ್ಟಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡಿಯುತ್ತಿದೆ. ದೊಡ್ಡವರು ಕೂತು ಮಾಡುತ್ತಿದ್ದಾರೆ. ದೊಡ್ಡ ಪ್ಲಾಂಟ್ ನಡೆಯುತ್ತಿದೆ. ನಾನು ಏನು ತಪ್ಪು ಮಾಡಿಲ್ಲ ಎಂದರು.
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ಕಳೆದ ವರ್ಷ ಬರಗಾಲ ಇತ್ತುಈ ವರ್ಷ ಬರಗಾಲ ಛಾಯೆ ಹೋಗಲಿ. ರೈತರ ಬದಕು ಹಸಿರಾಗಲಿ. ಐದು ಗ್ಯಾರಂಟಿ ಕೊಟ್ಟಿದ್ದೇವೆ. ಕೊಟ್ಟ ಮಾತುಉಳಿಸಿಕೊಂಡಿದ್ದೇವೆ. ಬಸವಣ್ಣನವರ ನಾಡಿನಲ್ಲಿ ಇದ್ದೇವೆ. ಮತ ಹಾಕಿದವರ ವಿಶ್ವಾಸ ಉಳಿಸಿಕೊಂಡಿದೆ ಎಂದರು.
ನನ್ನ ಸಂಸ್ಥೆಗೆ ನೋಟಿಸ್ ಬಂದಿದೆ. ನನ್ನ ಮಕ್ಕಳು, ಹೆಂಡತಿ ಗೆ ನೋಟಿಸ್ ಬಂದಿದೆ. ವೈಯಕ್ತಿಕವಾಗಿ ನೋಟಿಸ್ ಬಂದಿಲ್ಲ. ಆಮೇಲೆ ನನ್ನ ಹತ್ತಿರ ಬರ್ತಾರೆ ಎಂದರು. ಸಿಬಿಐ 10% ತನಿಖೆ ಮಾಡಿರಲಿಲ್ಲ. 90% ತನಿಖೆ ಮಾಡಿದ್ದೇವೆ ಅಂತ ಕೋರ್ಟ್ ಗೆ ಹೇಳಿದ್ರು. ಅಷ್ಟು ತನಿಖೆ ಆಗಿಲ್ಲ. ಬೇಕಿದ್ರೆ ನನ್ನನ್ನು ಒಳಗೆ ಹಾಕಿಕೊಳ್ಳಲಿ ಎಂದರು.