ಗದಗ: ಅಯೋಧ್ಯಾ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇವಸ್ಥಾನಗಳ ಆವರಣಗಳನ್ನು ಸ್ವಚ್ಚಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಹಿನ್ನೆಲೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ 17 ನೇ ವಾರ್ಡಿನ ಹೆಸರೂರ ರಸ್ತೆಯ,
ಆಶ್ರಯ ಕೊಲೋನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣವನ್ನು ಬಿಜೆಪಿ ಮುಖಂಡರಾದ ಕರಬಸಪ್ಪ ಹಂಚಿನಾಳ ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಜನವರಿ 21 ರ ವರೆಗೆ ಎಲ್ಲೆಡೆ ದೇವಾಲಯಗಳನ್ನು ಸ್ವಚ್ಛಗೊಳಿಸಿ 22 ರಂದು ಪ್ರತಿ ಮನೆಗಳಲ್ಲಿ ರಾಮಜ್ಯೋತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸುವಂತೆ ಕರೆ ನೀಡಲಾಯಿತು. ಸ್ವಚ್ಚತಾ ಕಾರ್ಯದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು