ಬೆಂಗಳೂರು: ನನ್ನ ಕ್ಷೇತ್ರವನ್ನು ವಿಶ್ವದಲ್ಲೇ ಮಾದರಿ ಕ್ಷೇತ್ರ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ ಹೇಳಿದ್ದಾರೆ.
Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ
ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರನ್ನು (H.D Kumaraswamy) ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ 20 ಲಕ್ಷ ಮತದಾರರಿದ್ದಾರೆ. ಅವರಿಗೆ ಮನವಿ ಮಾಡ್ತೀನಿ. ನನ್ನ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನೋಡಿ. ಈ ಅಭಿವೃದ್ಧಿಯನ್ನ ಇಡೀ ಲೋಕಸಭಾ ಕ್ಷೇತ್ರಕ್ಕೆ ವಿಸ್ತರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಸ್ವಾಭಾವಿಕ ಮೈತ್ರಿಯಾಗಿದ್ದು, ಎರಡೂ ಪಕ್ಷಗಳ ನಡುವೆ ಯಾವತ್ತೂ ವೈರತ್ವ ಇರುವ ಪಕ್ಷಗಳಲ್ಲ. ಸ್ಥಳೀಯ ಕಾರ್ಯಕರ್ತರು, ನಾಯಕರಿಗೆ ಒಟ್ಟಾಗಿ ಕೆಲಸ ಮಾಡ್ತಾರೆ. ಇದು ಸ್ವಾಭಾವಿಕ ಮೈತ್ರಿ. ಇಡೀ ರಾಜ್ಯದಲ್ಲಿ ಹಾಲು ಜೇನಿನಂತೆ ಬೆರತು ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತೇವೆ. ಒಳ್ಳೆಯ ಫಲಿತಾಂಶಕ್ಕಾಗಿ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಜನ ಮತ ನೀಡಲಿದ್ದಾರೆ ಎಂದು ಹೇಳಿದ್ದಾರೆ.
BIGG NEWS: ಬಿಜೆಪಿಗೆ ಮರು ಸೇರ್ಪಡೆಗೊಂಡ ಗಣಿ ಧಣಿ ಜನಾರ್ದನ ರೆಡ್ಡಿ
ಬಿಜೆಪಿ (BJP) ಹೈಕಮಾಂಡ್ ನಾಯಕರು, ಮೋದಿ, ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಕುಮಾರಸ್ವಾಮಿಯವರ ಸಹಕಾರದಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇನೆ. ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಹೇಳುತ್ತೇನೆ. ಮಾಜಿ ಶಾಸಕರಾದ ಎಂಟಿಬಿ ನಾಗರಾಜ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಜೆಡಿಎಸ್ ಮುಖಂಡರೆಲ್ಲರೂ ಆಶೀರ್ವಾದ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೋದಿಯವರ ಕಾಲಘಟ್ಟದಲ್ಲಿ ನನಗೆ ಅವಕಾಶ ಸಿಕ್ಕಿರುವುದು ಜನ್ಮ ಜನ್ಮಗಳ ಸೌಭಾಗ್ಯ ಎಂದಿದ್ದಾರೆ.