ಬೆಳಗಾವಿ: ಈ ಭಾರಿಯ ಬೆಳಗಾವಿ ಅಧಿವೇಶನ ರಾಜಕೀಯ ನಾಯಕರ ವಾಗ್ಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳಾದ ಬಿಜೆಪಿ- ಜೆಡಿಎಸ್ ಜಂಟಿ ಯಾಗಿ ಸಮರಕ್ಕಿಳಿದಿವೆ. ಕೈ ಸರ್ಕಾರದ ವಿರುದ್ದ ವಾಗ್ಯುದ್ಧಕ್ಕೆ ಕಮಲಾಧಿಪತಿಗಳು ಬ್ರಹ್ಮಸ್ತ್ರಗಳನ್ನೇ ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿವೆ.
ಬಿಜೆಪಿ- ಜೆಡಿಎಸ್ ಬಳಿ ಇರುವ ಬ್ರಹ್ಮಾಸ್ತ್ರಗಳು…
* ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ
* ಸರ್ಕಾರದ ಪಂಚ ಗ್ಯಾರಂಟಿಗಳ ವೈಪಲ್ಯ
* ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪ
* IT ದಾಳಿಯಲ್ಲಿ ಗುತ್ತಿಗೆ ದಾರರ ಮನೆಯಲ್ಲಿ ಹಣ ಸಿಕ್ಕ ಪ್ರಕರಣ
* ಡಿಸಿಎಂ ಡಿಕೆಶಿ CBI ಕೇಸ್ ವಾಪಸ್ ಪಡೆದ ಪ್ರಕರಣ
* ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ ಆರೋಪ
* ಜಾತಿಗಣತಿ ವರದಿ ಜಾರಿ ವಾರ್
* ಸಚಿವ ಜಮೀರ್ ಅಹ್ಮದ್ ಸ್ಪೀಕರ್ ವಿಚಾರವಾಗ ಹಿಂದೂ ವಿರೋಧಿ ಹೇಳಿಕೆ
* ಅಭಿವೃದ್ಧಿ ಕುಂಟಿತ, ಶಾಸಕರ ಅನುಧಾನ ತಾರತಮ್ಯ
ಇನ್ನು ವಿಪಕ್ಷ ನಾಯಕ ಅಶೋಕ್, ಮಾಜಿ ಸಿಎಂ ಕುಮಾರಸ್ವಾಮಿ ಒಟ್ಟಾಗಿ ಸರ್ಕಾರ ವಿರುದ್ಧ ಸಮರಕ್ಕಿಳಿದಿದ್ದಾರೆ, ಎರಡೂ ಪಕ್ಷಗಳು ಒಟ್ಟಾಗಿ ನಿಲುವಳಿ ಸೂಚನೆ ಮಂಡಿಸಲಿವೆ. ಈ ಬಗ್ಗೆ ಮಾತನಾಡಿದ ಅಶೋಕ್ ನಾವು ಎಲ್ಲಾ ವಿಚಾರಗಳಲ್ಲಿ ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಡ್ತೀವಿ ಇಬ್ಬರು ಸೇರಿ ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡ್ತೀವಿ ಎಂದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಹ ಈ ಹಿಂದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಮಾಡಿದ್ದ ಎಲ್ಲಾ ಆರೋಪಗಳಿಗೆ ದಾಖಲೆ ಸಮೇತ ಉತ್ತರ ಕೊಡೋದಾಗಿ ಸವಾಲು ಹಾಕಿದ್ದಾರೆ..